Tuesday, July 5, 2022

Latest Posts

ರಸ್ತೆ ಕಾಮಗಾರಿ ಹೆಸರಿನಲ್ಲಿ ಪಿಡಬ್ಲೂಡಿ ಅಧಿಕಾರಿ ಹಾಗೂ ಗುತ್ತಿಗೆದಾರರಿಂದ ವಂಚನೆ: ಇಬ್ಬರು ಅಮಾಯಕರ ಬಲಿ

ತುಮಕೂರು: ಪಿಡಬ್ಲೂಡಿ ಅಧಿಕಾರಿ ಹಾಗೂ ಗುತ್ತಿಗೆದಾರ ದಲಿತ ಕೇರಿಯ ಉದ್ದಾರದ ಹೆಸರಲ್ಲಿ ಮಾಡಿದ ವಂಚನೆಗೆ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ. ಸಿಸಿ ರಸ್ತೆ ನಿರ್ಮಾಣದ ಹೆಸರಿನಲ್ಲಿ ಲಕ್ಷಾಂತ ರೂ ಹಣ ಲಪಟಾಯಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಒಂದೂವರೆ ವರ್ಷದಿಂದ ಇದ್ದ ರಸ್ತೆಯನ್ನ ಕಳೆದುಕೊಂಡು ಜನರು ಕಣ್ಣೀರಿಡುತ್ತಿದ್ದಾರೆ.
ಹುಣಸವಾಡಿ ಗ್ರಾಮದಲ್ಲಿ ಈ ವಂಚನೆ ಪ್ರಕರಣ ನಡೆದಿದೆ. ಹುಣಸವಾಡಿ ಗ್ರಾಮವು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿಗೆ ಸೇರುತ್ತಾದರೂ ಕೊರಟಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಕೊರಟಗೆರೆ ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಶಾಸಕರಾಗಿರುವ ಕ್ಷೇತ್ರ. 2018-19ನೇ ಸಾಲಿನಲ್ಲಿ ಹುಣಸವಾಡಿ ಗ್ರಾಮದ ಮುಖ್ಯ ರಸ್ತೆಯಿಂದ ಎಸ್.ಸಿ. ರಂಗಪ್ಪ ಮನೆವರೆಗೆ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಪಿಡಬ್ಲೂಡಿ ಅಧಿಕಾರಿಗಳು ಮುಂದಾದರು.
200ಕ್ಕೂ ಮನೆಗಳಿರುವ ದಲಿತ ಕಾಲೋನಿಯಲ್ಲಿ ಚಪ್ಪಡಿ ಕಲ್ಲುಗಳಿಂದಲೇ ನಿವಾಸಿಗಳು ಉತ್ತಮ ರಸ್ತೆ ನಿರ್ಮಿಸಿಕೊಂಡಿದ್ದರು. ಸಿಸಿ ರಸ್ತೆಯೇ ಬೇಡ ಅಂದರೂ ಬಲಂತವಾಗಿ ಸಿಸಿ ರಸ್ತೆ ನಿರ್ಮಾಣಕ್ಕೆ ಗುತ್ತಿಗೆದಾರ ಪುನೀತ್, ಎಇಎಸ್ ರಾಜಗೋಪಾಲ್ ಅವರು ಮುಂದಾದರು. ಜನರ ವಿರೋಧ ಹೆಚ್ಚಾದಾಗ ವಿಎಸ್​ಎಸ್​ನ ನಿರ್ದೇಶಕ ಅಶ್ವಥಪ್ಪ ಬಳಿ ತೆರಳಿ ಸ್ಥಳೀಯರ ಮನವೊಲಿಸುವಂತೆ ಕೇಳಿಕೊಂಡರು. ಅಶ್ವಥಪ್ಪ ಜನರ ಮನವೊಲಿಸಿದ ಬಳಿಕ ರಸ್ತೆ, ಚರಂಡಿ ನಿರ್ಮಾಣಕ್ಕೆ ಮುಂದಾಗಲಾಯಿತು.
ಚರಂಡಿ ನಿರ್ಮಾಣ ಮಾಡಿ ಬಳಿಕ ಸಿಸಿ ರಸ್ತೆ ಮಾಡದೆ ಕಾಮಗಾರಿಗೆ ಎಇಗಳಾದ ಎಸ್.ಸಿ. ರಾಜಗೋಪಾಲ್ ಮತ್ತು ಬಿ.ಆರ್. ತಿಪ್ಪೇಸ್ವಾಮಿ ಅವರು ಕಾಮಗಾರಿಯಾಗಿದೆ ಎಂದು ಸುಳ್ಳು ಸ್ಥಳ ಪರಿಶೀಲನಾ ವರದಿ ನೀಡಿ 6 ಲಕ್ಷ ರೂ. ಬಿಡುಗಡೆ ಮಾಡಿ ಗುತ್ತಿಗೆದಾರರನ ಜೇಬು ತುಂಬಿಸಿದ್ದಾರೆ ಅನ್ನೋ ಗಂಭೀರ ಆರೋಪ ಇದೆ. ಪೊಲೀಸರ ಕಾರ್ಯನಿಷ್ಠೆ ಬಗ್ಗೆ ಮಾತನಾಡುತ್ತಾ ಗದ್ಗದಿತರಾದ ಗೃಹ ಸಚಿವ ಬಸವರಾಜ ಬೊಮ್ಮಾಯಿ
ಅಪೂರ್ಣಗೊಂಡ ರಸ್ತೆಯಲ್ಲಿ ಎಡವಿ ಬಿದ್ದು ಕಾಲೋನಿಯ ನರಸೀಯಪ್ಪ ಮತ್ತು ನರಸಪ್ಪ ಅನ್ನೋ ಇಬ್ಬರು ಮೃತಪಟ್ಟಿದ್ದಾರೆ. ವರ್ಷ ಕಳೆದ್ರೂ ರಸ್ತೆ ಪೂರ್ಣಗೊಳ್ಳದ ಬಗ್ಗೆ ಇಲಾಖೆಯನ್ನ ಸಂಪರ್ಕಿಸಿದ ಜನರಿಗೆ ಸರ್ಕಾರದ ಹಣ ಪಡೆದ ವಂಚನೆ ಬೆಳಕಿಗೆ ಬಂದಿದೆ. ಕಾಲೋನಿಯ ಜನರ ಮನವೊಲಿಸಿ ಗುತ್ತಿಗೆದಾರ, ಎಇ ಬೆಂಬಲಕ್ಕೆ ನಿಂತಿದ್ದ ಅಶ್ವಥಪ್ಪ, ಕಾಮಗಾರಿ ನಡೆಸದ ಬಗ್ಗೆ ಎಇ ಎಸ್. ರಾಜಗೋಪಾಲ್ ಅವರನ್ನ ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಪ್ರತಿಯಾಗಿ, ಜನರನ್ನ ಎತ್ತಿಕಟ್ಟಿ ಗಲಾಟೆ ಮಾಡಿಸ್ತೀಯಾ ಎಂದು ಅವರ ಮೇಲೆಯೇ ಸುಳ್ಳು ಜಾತಿನಿಂದನೆ ಕೇಸ್ ಹಾಕಿ ದರ್ಪ ದೌರ್ಜನ್ಯ ಮೆರೆದಿದ್ದಾರೆ ಎಇ ಎಸ್.ರಾಜಗೋಪಾಲ್. ಅನ್ಯಾಯವನ್ನ ಪ್ರಶ್ನಿಸಿದವರ ಮೇಲೆ ಪ್ರಕರಣ ದಾಖಲಿಸಿದಕ್ಕೆ ಜನರ ಆಕ್ರೋಶ ಮತ್ತಷ್ಟು ಹೆಚ್ಚಾಯ್ತು. ಅನ್ಯಾಯದ ವಿರುದ್ಧ ಸಿಡಿದೆದ್ದ ಜನರು ಕ್ಷೇತ್ರದ ಶಾಸಕ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರನ್ನ ಭೇಟಿ ಮಾಡಿ ಗಮನ ಸೆಳೆದಿದ್ದಾರೆ. ಡಾ.ಜಿ.ಪರಮೇಶ್ವರ್ ಗುತ್ತಿಗೆದಾರ ಪುನೀತ್ ಹಾಗೂ ಎಇ ರಾಜಗೋಪಾಲ್​ಗೆ ಜನರ ಮುಂದೆಯೇ ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಿದೆ ಉದ್ದಟತನ ತೋರಿದ್ದಾರೆನ್ನಲಾಗಿದೆ.
ಮೈಸೂರಿನಲ್ಲಿ ಕೊರೋನಾ ಸಮುದಾಯಕ್ಕೆ ಹರಡುವ ಸಾಧ್ಯತೆ ಇದೆ ಎಚ್ಚರವಿರಲಿ: ಜಿಲ್ಲಾಧಿಕಾರಿ ಅಭಿರಾಂ.ಜಿ.ಶಂಕರ್ ಕಳವಳ ಸಿಸಿ ರಸ್ತೆ ಪೂರ್ಣಗೊಳಿಸುವಂತೆ ವಿನಯಪೂವರ್ಕವಾಗಿ ಜನರು ಕೇಳಿಕೊಂಡರೂ ಗುತ್ತಿಗೆದಾರ, ಅಧಿಕಾರಿ ದೌರ್ಜನ್ಯ ಎಸಗಿದ್ದಾರೆ. ಕೂಡಲೇ ರಸ್ತೆ ನಿರ್ಮಾಣ ಮಾಡಬೇಕು. ಸುಳ್ಳು ಜಾತಿನಿಂದನೆ ಕೇಸ್ ವಾಪಸ್ ಪಡೆಯಬೇಕು. ಇಲ್ಲವಾದರೆ ನೂರಾರು ಸಂಖ್ಯೆಯಲ್ಲಿ ಬೆಂಗಳೂರಿನ ವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಸಲು ಸಜ್ಜಾಗಿದ್ದೇವೆ ಎಂದು ದಲಿತ ಕೇರಿ ಜನರು ಎಚ್ಚರಿಕೆ ನೀಡಿದ್ದಾರೆ.
ಜನಾಂಗದ ಅಭಿವೃದ್ದಿ ಹೆಸರಿನಲ್ಲೇ ದೋಖಾ ಮಾಡಿರುವ ಈ ಅಧಿಕಾರಿ ನಡೆಸಿರುವ ವಂಚನೆ ಪ್ರಕರಣಗಳು ಅದೆಷ್ಟಿರಬಹುದು ಎಂದು ಅನೇಕರು ಸಂದೇಹಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss