Wednesday, July 6, 2022

Latest Posts

ರಸ್ತೆ ಬದಿಯ ಬ್ಯಾರಿಕೇಟ್‌ಗೆ ಕಾರು ಡಿಕ್ಕಿ: ಐವರಿಗೆ ಗಾಯ

ಮದ್ದೂರು: ರಸ್ತೆ ಬದಿಯ ಬ್ಯಾರಿಕೇಟ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ಗಾಯಗೊಂಡಿರುವ ಘಟನೆ ತಾಲೂಕಿನ ಛತ್ರಲಿಂಗನದೊಡ್ಡಿ ಸಮೀಪ ನಡೆದಿದೆ.
ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕಿನ ಹಿತ್ತಲಪುರ ಗ್ರಾಮದ ಪುನೀತ್ ತೀವ್ರವಾಗಿ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ೪ ವರ್ಷದ ಮಗು ಪ್ರಣವ್ ಹಾಗೂ ಸಾವಿತ್ರಮ್ಮ, ಜಯಶೀಲ ಹಾಗೂ ಕಾರಿನ ಚಾಲಕ ಚೇತನ್‌ಗೆ ಸಣ್ಣಪುಟ್ಟ ಗಾಯಗಳಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಂದೇ ಕುಟುಂಬದ ಐವರು ಕಾರಿನಲ್ಲಿ ಹಿತ್ತಲಪುರ ಗ್ರಾಮದಿಂದ ಮಂಡ್ಯಕ್ಕೆ ಕಾರಿನಲ್ಲಿ ಹೋಗುವಾಗ ಬ್ಯಾರಿಕೇಟ್‌ಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss