Wednesday, August 10, 2022

Latest Posts

ರಾಕಿಂಗ್ ಸ್ಟಾರ್ ಯಶ್‌ಗೆ ಜನ್ಮದಿನದ ಸಂಭ್ರಮ: ಮನೆ ಬಳಿ ಬರಬೇಡಿ ಎಂದು ಯಶ್ ಹೇಳಿದ್ಯಾಕೆ?

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇಂದು ರಾಕಿಂಗ್ ಸ್ಟಾರ್ ಯಶ್‌ಗೆ 35 ನೇ ಹುಟ್ಟುಹಬ್ಬದ ಸಂಭ್ರಮ. ಈ ಬಾರಿ ರಾಕಿ ಭಾಯ್ ಹುಟ್ಟುಹಬ್ಬ ತುಂಬಾನೇ ಸ್ಪೆಶಲ್. ಯಾಕಂತೀರಾ?
ತೀವ್ರ ಕುತೂಹಲ ನಿರ್ಮಿಸಿದ್ದ ಕೆಜಿಎಫ್2 ನ ಟೀಸರ್ ಬಿಡುಗಡೆಯಾಗಿದೆ. ಯಶ್ ಹುಟ್ಟುಹಬ್ಬದ ದಿನದಂದೇ ಟೀಸರ್ ರಿಲೀಸ್ ಮಾಡಬೇಕು ಎಂದು ಚಿತ್ರತಂಡ ಅಂದುಕೊಂಡಿತ್ತು. ಆದರೆ ನಿನ್ನೆ ರಾತ್ರಿ 9:30ಕ್ಕೆ ಯಾರೋ ಟೀಸರ್ ಬಿಡುಗಡೆ ಮಾಡಿದ್ದು, ಎಲ್ಲೆಡೆ ಹರಿದಾಡಿತ್ತು. ನಂತರ ಚಿತ್ರತಂಡ ಕೂಡ ಟೀಸರ್ ರಿಲೀಸ್ ಮಾಡಿದ್ದರು.
ಈ ಬಾರಿ ತಮ್ಮ ಹುಟ್ಟುಹಬ್ಬಕ್ಕೆ ಯಾರೂ ಬರಬೇಡಿ. ಎಲ್ಲಿದ್ದೀರೋ ಅಲ್ಲಿಂದಲೇ ವಿಶ್ ಮಾಡಿ, ಸುಮ್ಮನೆ ನೀವು ಬಂದು ಏನಾದರು ಸಮಸ್ಯೆಯಾದರೆ ನನ್ನ ಮನಸ್ಸಿಗೆ ನೋವಾಗುತ್ತದೆ ಎಂದು ಯಶ್ ಮನವಿ ಮಾಡಿದ್ದಾರೆ. ಆದರೆ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಯಶ್ ಬರ್ಥಡೇ ಆಚರಿಸಲು ತಯಾರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss