ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಸ್ಯಾಂಡಲ್ವುಡ್ ನ ಕೆಜಿಎಫ್-2 ಸಿನಿಮಾದ ಟೀಸರ್ ವಿಚಾರಕ್ಕೆ ಸಂಬಂಧಿಸಿದಂತೆ ನಟ ರಾಕಿಂಗ್ ಸ್ಟಾರ್ ಯಶ್ ಗೆ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ.
ಕೆಜಿಎಫ್ -2 ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆಯಾಗಿ ಟೀಸರ್ ನಲ್ಲಿ ಬಂದೂಕಿನಿಂದ ರಾಕಿಂಗ್ ಸ್ಟಾರ್ ಸಿಗರೇಟ್ ಹಚ್ಚುವ ದೃಶ್ಯ ಇದ್ದು , ಈಗ ಅದೇ ದೃಶ್ಯದಿಂದಾಗಿ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ.
ಈ ದೃಶ್ಯ ಯುವಕರನ್ನು ಪ್ರಚೋದಿಸುತ್ತದೆ. ಹೀಗಾಗಿ ದೃಶ್ಯ ತೆಗೆಯುವಂತೆ ಸೂಚನೆ ನೀಡಿ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ. ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಕಾಯ್ದೆ 2003, ಸೆಕ್ಷನ್ 5 ರ ಪ್ರಕಾರ ನಿಬಂಧನೆಗಳ ಉಲ್ಲಂಘನೆಯಾಗಿದ್ದು, ಆರೋಗ್ಯ ಇಲಾಖೆಯು ಈ ಕಾಯ್ದೆಯಡಿ ಯಶ್ ಗೆ ನೋಟಿಸ್ ನೀಡಿದೆ.