Saturday, July 2, 2022

Latest Posts

ದೇಶದ ಹಿತಕ್ಕಾಗಿ ಪಕ್ಷ, ಧರ್ಮ ಮರೆತು ಜೊತೆಯಾಗಿ ಬೆಳಗಿತು ಜ್ಯೋತಿ !

ಹೊಸದಿಲ್ಲಿ: ದೇಶದಲ್ಲಿ ಕೊರೋನಾ ನಾಶವಾಗಲೆಂದು ಭಾನುವಾರ ರಾತ್ರಿ 9 ಗಂಟೆಗೆ ದೇಶದ ಜನತೆ ಮನೆಯ ಬಾಲ್ಕನಿಗಳಲ್ಲಿ ದೀಪ ಬೆಳಸುವಂತೆ ಕೋರಿದ್ದ ಪ್ರಧಾನಿ ಕರೆಗೆ ಓಗೊಟ್ಟು ದೇಶದ ಹಿರಿಯ ರಾಜಕಾರಣಿಗಳು, ಸ್ವಾಮೀಜಿಗಳು, ಶಾಸಕರು, ಸಂಸದರು, ಸಿನಿ ತಾರೆಯರು ತಮ್ಮ ಮನೆಯ ಅಂಗಳದಲ್ಲಿ ದೀಪಬೆಳಗಿ ದೇಶದ ಜನತೆಯ ಜೊತೆಗೆ ಕೈ ಜೋಡಿಸಿದ್ದಾರೆ.

ರಾಷ್ಟ್ರಪತಿ ರಾಮನಾತ್ ಕೋವಿಂದ್, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ದೇವೆಗೌಡ, ಸೇರಿದಂತೆ ದೇಶದ ಹಿರಿಯ ರಾಜಕಾರಣಿಗಳು ಮನೆಯಲ್ಲಿ ದೀಪ ಬೆಳಗಿಸಿದರು.

ರಾಜ್ಯದ ರೋಗ್ಯ ಸಚಿವ ಶ್ರೀರಾಮುಲು, ಸಂಸದೆ ಸುಮಲತಾ ಅಂಬರೀಶ್, ಶಾಸಕ ಆರ್. ಅಶೋಕ್ ದೀಪ ಬೆಳಗಿಸಿದರು.
ಮೈಸೂರು ಅರಸರಾದ ಕೃಷ್ಣದತ್ತ ಒಡೆಯರ್ ಪತ್ನಿ ಜೊತೆಗೆ ದೀಪ ಬೆಳಗಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೇನ್ ಅವರು ದೀಪ ಬೆಳಗಿ ದೇಶದ ಒಳಿತಿಗಾಗಿ ಪ್ರಾರ್ಥಿಸಿದರು.

ಸಿನಿ ತಾರೆಯರಾದ ರಜಿನಿಕಾಂತ್, ಅನಿರುದ್, ನಟಿ ತಾರ ಸೇರಿದಂತೆ ಅನೇಕ ಕಲಾವಿದರು ದೀಪ ಹೊತ್ತಿಸಿ ಪ್ರಾರ್ಥಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss