spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಾಜಕೀಯ ಜಿದ್ದಾಜಿದ್ದಿಗೆ ಚನ್ನಪಟ್ಟಣ ತಶೀಲ್ದಾರ್ ಸುದರ್ಶನ ವರ್ಗಾವಣೆ

- Advertisement -Nitte

ರಾಮನಗರ : ಕಳೆದ ಮೂರು ದಿನಗಳಿಂದ ತಾಲ್ಲೂಕಿನಲ್ಲಿ ಚರ್ಚೆಯಾಗಿ ತೀವ್ರ ಕುತೂಹಲ ಕೆರಳಿಸಿದ್ದ ತಾಲ್ಲೂಕು ದಂಡಾಧಿಕಾರಿಗಳ ವರ್ಗದ ವಿಚಾರದಲ್ಲಿ ಈಗಾಗಲೇ ಅಂದರೆ ಸೋಮವಾರವೇ ಅಧಿಕಾರ ಸ್ವೀಕಾರ ಮಾಡಿರುವ ದಂಡಾಧಿಕಾರಿ ನಾಗೇಶ್‌ರವರೇ ಮುಂದುವರಿಯಲಿದ್ದು ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ದಂಡಾಧಿಕಾರಿ ಸುದರ್ಶನ್ ಚಾಮರಾಜನಗರ ತಾಲ್ಲೂಕು ಕಛೇರಿಗೆ ನಿಯೋಜನೆಗೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿರವರೇ ಖುದ್ದಾಗಿ ದಂಡಾಧಿಕಾರಿ ಸುದರ್ಶನ್ ವರ್ಗಾವಣೆಗೆ ಸರ್ಕಾರಕ್ಕೆ ಪತ್ರ ಬರೆದು ಮಂಡ್ಯ ತಾಲ್ಲೂಕು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದಂಡಾಧಿಕಾರಿ ನಾಗೇಶ್‌ರವರನ್ನು ತಾಲ್ಲೂಕಿಗೆ ನಿಯೋಜನೆಗೊಳಿಸುವಂತೆ ನೋಡಿಕೊಂಡಿದ್ದರು.

ಕಳೆದ ಸೋಮವಾರ ಮದ್ಯಾಹ್ನವೇ ದಂಡಾಧಿಕಾರಿ ನಾಗೇಶ್ ತಾಲ್ಲೂಕು ಕಛೇರಿಗೆ ತೆರಳಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಇತ್ತ ಇದ್ಯಾವುದರ ಪರಿವೇ ಇಲ್ಲದ ದಂಡಾಧಿಕಾರಿ ಸುದರ್ಶನ್ ತಮ್ಮ ಏಕಾಏಕಿ ವರ್ಗಾವಣೆಯನ್ನು ಪ್ರಶ್ನಿಸಿ ಬೆಂಗಳೂರಿನತ್ತ ಧಾವಿಸಿದ್ದರೂ ಪ್ರಯೋಜನವಾಗಲಿಲ್ಲ.

ದಂಡಾಧಿಕಾರಿ ಸುದರ್ಶನ್‌ರವರೇ ಮುಂದುವರಿಲಿ ಎಂದು ಹಾಲಿ ಎಂ.ಎಲ್.ಸಿ ಸಿ.ಪಿ.ಯೋಗೀಶ್ವರ್ ಶತಾಯಗತಾಯ ಪ್ರಯತ್ನಪಟ್ಟರು ಯಶಸ್ಸು ಸಿಗಲಿಲ್ಲ.ಅಲ್ಲದೆ ದಂಡಾಧಿಕಾರಿ ಸುದರ್ಶನ್‌ರವರೇ ಮುಂದುವರಿಯಲ್ಲ ಎಂದು ಮುಖ್ಯಮಂತ್ರಿಗಳು ಸಹಿ ಮಾಡಿ ಆದೇಶವನ್ನು ಒಂದು ವಾರದಲ್ಲಿ ನೀಡಲಿದ್ದಾರೆಂದು ಮಾಹಿತಿ ಬಂದಿದ್ದರೂ, ಬುಧವಾರ ರಾತ್ರಿಯೇ ಸುದರ್ಶನ್‌ರವರನ್ನು ಚಾಮರಾಜನಗರಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ದಂಡಾಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಎಂಎಲ್‌ಸಿ ಸಿ.ಪಿ.ಯೋಗೀಶ್ವರ್ ಮೊಟ್ಟ ಮೊದಲ ಬಾರಿಗೆ ಹಿನ್ನಡೆಯಾಗಿದ್ದು, ದಳಿಗರ ಪಡೆಯೇ ಯಶಸ್ಸು ಸಾಧಿಸಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss