Monday, July 4, 2022

Latest Posts

ರಾಜಕೀಯ ಬಿಸಿನೆಸ್ ಅಲ್ಲ ಅದೊಂದು ಸಾಮಾಜಿಕ ಜವಾಬ್ದಾರಿ : ಡಾ. ಸಂದೀಪ್ ಕುಮಾರ್

ಹೊಸ ದಿಗಂತ ವರದಿ,ಯಾದಗಿರಿ:

ರಾಜಕೀಯ ಎಂಬುದು ಬಿಸಿನೆಸ್ ಅಲ್ಲ ಅದೊಂದು ಸಾಮಾಜಿಕ ಜವಾಬ್ದಾರಿ ಯಾಗಿದೆ ಎಂದು ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಡಾ.ಸಂದೀಪ್‌ ಕುಮಾರ್ ಕೆ.ಸಿ. ಅಭಿಪ್ರಾಯಪಟ್ಟರು.
ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ಏರ್ಪಡಿಸಿದ್ದ ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡು ನಂತರ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಯುವಮೋರ್ಚಾ ಕಾರ್ಯಕರ್ತರ ಸಮಾವೇಶವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇಂತಹ ಅರಿವು ನಮ್ಮ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮೂಡಿದೆ ಹೀಗಾಗಿ ದೇಶದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ದೇಶಪ್ರೇಮ, ದೇಶಭಕ್ತಿ ವ್ಯಕ್ತವಾಗುತ್ತಿದೆ. ಯುವಮೋರ್ಚಾ ಕಾರ್ಯಕರ್ತರು ಸಮಾಜ ಸರ್ಕಾರದ ಮದ್ಯೆ ಸೇತುವೆಯಾಗಿ ಕೆಲಸ ನಿರ್ವಹಿಸುವಂತಾಗಬೇಕು ಈ ನಿಟ್ಟಿನಲ್ಲಿ ಯುವಮೋರ್ಚಾ ಕಾರ್ಯಕರ್ತರು ಕಾರ್ಯನಿರ್ವಹಿಸಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಚುಕ್ಕಾಣಿ ಹಿಡಿದ ನಂತರ ದೇಶ ಜಗತ್ತಿನ ಇತರ ದೇಶಗಳಿಗಿಂತಲೂ ಎತ್ತರದ ಸ್ಥಾನಕ್ಕೆ ತಲುಪಿದೆ. ಈ ಸಂಗತಿಯನ್ನು ದೇಶದ ಮೂಲೆ ಮೂಲೆಯಲ್ಲಿರುವ ಜನತೆಗೆ ತಿಳಿಸುವ ಕೆಲಸವನ್ನು ಯುವಮೋರ್ಚಾ ಕಾರ್ಯಕರ್ತರು ಮಾಡಬೇಕೆಂದು ಅವರು ಕರೆ ನೀಡಿದರು.
ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರೆಡ್ಡಿ ಮಾತನಾಡಿ ಯುವಮೋರ್ಚಾದಲ್ಲಿ ಕೆಲಸ ಮಾಡಿದವರೇ ಇಂದು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅದೇ ರೀತಿ ಹಾಲಿ ಯುವಮೋರ್ಚಾ ಕಾರ್ಯಕರ್ತರು ಅತ್ಯಂತ ಅರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಮಾಜಿ ಶಾಸಕ ಡಾ ವೀರಬಸವಂತರಡ್ಡಿ ಮುದ್ನಾಳ್ ಮಾತನಾಡಿ, ಬಿಜೆಪಿ ಪಾರ್ಟಿ ವಿತ್ ಡಿಫರೆನ್ಸ್ ಎಂಬ ಮಾತನ್ನು ಅಕ್ಷರಶಃ ಸಾಬೀತು ಮಾಡಿದೆ. ಇದಕ್ಕೆ ಸಾಕ್ಷಿ ಎಂಬoತೆ ವೇದಿಕೆ ಮೇಲೆ ಹಲವು ವೈದ್ಯರೇ ಇರುವುದೇ ಸಾಕ್ಷಿಯಾಗಿದೆ ಆದ್ದರಿಂದ ವಿಶೇಷಜ್ಞರು ಬಿಜೆಪಿಗೆ ಬರಬೇಕು ಮುಖ್ಯವಾಹಿನಿಯಲ್ಲಿ ಸೇರಿಕೊಂಡು ಭಾರತ ಮಾತೆಯ ಸೇವೆ ಮಾಡಲು ಮುಂದಾಗಬೇಕು ದೇಶಸೇವೆಗೆ ಬಿಜೆಪಿ ಯುವಮೋರ್ಚಾ ದಂತಹ ವೇದಿಕೆ ಇನ್ನೊಂದಿಲ್ಲ ಎಂದು ಅವರು ಹೇಳಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಮಲ್ಲಿಕಾರ್ಜುನ ಬಾಳಿಕಾಯಿ, ಅಜಿತ್ ಹೆಗ್ಡೆ, ಉಪಾಧ್ಯಕ್ಷರಾದ ಪ್ರಶಾಂತ್ ಶೃಂಗೇರಿ, ವಸಂತ ಗೌಡ ಮತ್ತು ಕಾರ್ಯದರ್ಶಿಗಳಾದ ಅಂಬ್ರೇಶ ರೈತನಗರ, ಈರಣ್ಣ ಅಂಗಡಿ, ಕಿರಣ್ ಪಾಲಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದೇವೀಂದ್ರನಾಥ್ ನಾದ್ ಮತ್ತು ವೆಂಕಟರಡ್ಡಿ ಅಬ್ಬೆತುಮಕೂರು ಮಾತನಾಡಿದರು.
ಯುವ ಮೋರ್ಚ ಜಿಲ್ಲಾ ಅಧ್ಯಕ್ಷ ಮೌನೇಶ್ ಬಡಿಗೇರ್ ಪ್ರಾಸ್ತಾವಿಕ ಮಾತನಾಡಿ ರಾಜ್ಯ ಸಮಿತಿ ನಿರ್ದೇಶನಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಪಾಲನೆ ಮಾಡಿ ಜಿಲ್ಲೆಯಲ್ಲಿ ಹೋರಾಟಗಳು ರೂಪಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರವಾದ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ್, ಉಪಾಧ್ಯಕ್ಷೆ ಪ್ರಭಾವತಿ ಕಲಾಲ್, ಯುಡಾ ಅಧ್ಯಕ್ಷ ಬಸವರಾಜ ಚಂಡ್ರಿಕಿ, ನಗರ ಮಂಡಲ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯರಾದ ಸುರೇಶ್ ಅಂಬಿಗರ, ಅಂಬಯ್ಯ ಶಾಬಾದಿ, ಯುವ ಮೋರ್ಚಾ ನಗರ ಅಧ್ಯಕ್ಷ ಶರಣಗೌಡ ಕನ್ಯಕೋಳೂರ, ವಿರೂಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ, ಶರಣಗೌಡ ಐಕೂರು, ಶ್ರವಣಕುಮಾರ, ಭೀಮು ರಾಜಾಪೂರ, ಮಂಜುನಾಥ್ ಗುತ್ತೇದಾರ್, ಶಿವು ನಂದೇಪಲ್ಲಿ, ರಾಜು ಶಹಾಪೂರ ಇನ್ನಿತರರು ಇದ್ದರು.
ಸಾಯಬಣ್ಣ ಮಡಿವಾಳ ನಿರೂಪಿಸಿದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲನಗೌಡ ಗುರುಸುಣಗಿ ಸ್ವಾಗತ ಕೋರಿದರು, ಮಲ್ಲು ಚಾಪೆಲ್ ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss