ಹೊಸದಿಗಂತ ವರದಿ,ಧಾರವಾಡ:
ಕೊರೋನಾ ಸಂಕಷ್ಟದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಕುಂಠಿತಗೊoಡಿವೆ. ರಾಜಧನ ಹೆಚ್ಚಳಕ್ಕೆ ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿಗೆ ತಂದಿರುವುದಾಗಿ ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಲಾಕ್ಡೌನ್ ಪರಿಣಾಮ ಮರಳು ಕೊರತೆಯಿಂದ ಸರ್ಕಾರಿ, ಖಾಸಗಿ ಬಹುತೇಕ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿವೆ. ಅಭಿವೃದ್ಧಿಗೆ ವೇಗ ಹೆಚ್ಚಳಕ್ಕೆ ಆದ್ಯತೆ ನೀಡಿದೆ ಎಂದರು.
ಇದೇ ಕಾರಣಕ್ಕೆ ಕರ್ನಾಟಕ ಸರ್ಕಾರದಿಂದ ಹೊಸ ಮರಳು ನೀತಿ ಜಾರಿಗೆ ತರಲಾಗಿದೆ. ಇದರಿಂದ ಅತ್ಯಂತ ಕಡಿಮೆ ದರದಲ್ಲಿ ಮರಳು ಲಭಿಸಲಿದೆ. ಎಂಸ್ಯಾoಡಿಗೆ ಉತ್ತೇಜಿಸಿದ್ದರಿಂದ ಸರ್ಕಾರಕ್ಕೆ ಬರವ ರಾಜಧನ ಬರಲಿದೆ ಎಂದರು.
ಹೊಸ ನೀತಿಯಲ್ಲಿ ಎಷ್ಟೇ ಪ್ರಭಾವಿಗಳಿದ್ದರೂ, ಅವರಾಟ ನಡೆಯಲ್ಲ. ಇನ್ನೂ ಕಲ್ಲಿನ ಕ್ವಾರಿಗಳಿಂದ ಪೌಡರ್ ಸಮಸ್ಯೆಯಾಗುವುದು ನಿಜ. ಸೇಫರ್ ಝೋನ್ ಮಾಡಲು ಹೇಳಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳಲಿದೆ ಎಂದರು.
ನಮ್ಮ ಸರ್ಕಾರ ಯಾವುದೇ ಅಧಿಕಾರಿಗಳಿಗೆ ಒತ್ತಡ ಹಾಕಿಲ್ಲ. ಡಿವೈಎಸ್ಪಿ ಆತ್ಮಹತ್ಯೆ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲವೆAದು ತಿಳಿಸಿದರು.