ಬೆಂಗಳೂರು: ಸತತ ಲಾಕ್ಡೌನ್ ಗಳ ಬಳಿಕ ರಾಜ್ಯದಲ್ಲಿ ಒಂದೊಂದಾಗಿ ಸೇವೆಗಳು ಆರಂಭಗೊಳ್ಳುತ್ತಿದ್ದು, ಈಗ ಮೆಟ್ರೋ ರೈಲು ಮತ್ತೆ ಸೇವೆ ನೀಡಲು ಸಜ್ಜಾಗುತ್ತಿದೆ.
ಇದಕ್ಕೆ ಪೂರ್ವಭಾವಿಯಾಗಿ ಸಿಬ್ಬಂದಿಗೆ ತರಬೇತಿ ಆರಂಭವಾಗಿದ್ದು, ರೈಲು ಸಂಚಾರ ಆರಂಭವಾದ ಬಳಿಕ ಯಾವ ರೀತಿಯಾಗಿ ಕಾರ್ಯನಿರ್ವಹಿಸಬೇಕು ಎನ್ನುವ ಬಗ್ಗೆ ತಿಳಿಸಿಕೊಡಲಾಗುತ್ತಿದೆ.
ಮೂಲಗಳ ಪ್ರಕಾರ ಜೂ.1ರಿಂದ ಮೆಟ್ರೋ ರೈಲು ಸಂಚಾರ ಆರಂಭಿಸುವ ಸಾಧ್ಯತೆ ಇದೆ. ನಮಗೆ ಈ ವಿಚಾರವಾಗಿ ಕೇಂದ್ರ ಗೃಹ ಸಚಿವಾಲಯದಿಂದ ಯಾವುದೇ ನಿರ್ದೇಶನ ಬಂದಿಲ್ಲ. ಸದ್ಯಕ್ಕೆ ಮೇ 31ರವರೆಗೆ ಮೆಟ್ರೊ ರೈಲು ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಬಿಎಂಆರ್ಸಿಎಲ್ ಮೂಲಗಳು ತಿಳಿಸಿವೆ.
ಒಂದುವೇಳೆ ಮೆಟ್ರೊ ರೈಲು ಆರಂಭವಾದರೂ, ರೈಲಿನಲ್ಲಿ 60 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷ ವಯಸ್ಸಿನೊಳಗಿನವರಿಗೆ ಸಂಚಾರ ಮಾಡಲು ಅವಕಾಶ ನೀಡಲಾಗುವುದಿಲ್ಲ. ಪ್ರಯಾಣಿಕರಿಗೆಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಅಲ್ಲದೇ, ನಿಲ್ದಾಣದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುತ್ತದೆ. ಇನ್ನು ಒಂದು ಸಲಕ್ಕೆ ಗರಿಷ್ಠ 350 ಜನರಿಗೆ ಮಾತ್ರ ರೈಲಿನಲ್ಲಿ ಪ್ರಯಾಣ ಮಾಡಲು ಅವಕಾಶ ನೀಡಲಾಗುತ್ತದೆ.