Thursday, July 7, 2022

Latest Posts

ರಾಜಧಾನಿ ಬೆಂಗಳೂರಿನಲ್ಲಿ ಶುರುವಾಗಿದೆ ಧೋ ಮಳೆ: ಮತ್ತೆ ಕಂಗಾಲಾಗಿದ್ದಾರೆ ಸಿಲಿಕಾನ್ ಸಿಟಿಯ ಜನ!

ಮಂಗಳೂರು: ಶುಕ್ರವಾರವಷ್ಟೇ ಎಲ್ಲರನ್ನೂ ಕಂಗಾಲಾಗಿಸಿದ್ದ ಮಳೆ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಸಂಜೆಯ ಬಳಿಕ ಮತ್ತೆ ಕಾಣಿಸಿಕೊಂಡಿದೆ.
ನಗರದ ಮಲ್ಲೇಶ್ವರಂ, ಶ್ರೀರಾಮಪುರ, ರಾಜಾಜಿನಗರ, ಯಶವಂತಪುರ, ಸುಬ್ರಮಣ್ಯನಗರ ಮೊಡ್ಲಾದ ಕಡೆಗಳಲ್ಲಿ ಸಾಧಾರಣ ಮಳೆ ಆರಂಭವಾಗಿದ್ದು, ಮಳೆ ತೀವ್ರತೆ ಪಡೆದುಕೊಳ್ಳುವ ಸೂಚನೆ ನೀಡಿದೆ. ರಾತ್ರಿ ಸುಮಾರು 8.30ರ ಬಳಿಕ ಸಣ್ಣದಾಗಿ ಶುರುವಾದ ಮಳೆ ಬಳಿಕ ತೀವ್ರತೆ ಪಡೆದುಕೊಂಡಿದ್ದು, ಪಾದಚಾರಿಗಳು ಪರದಾಡುವಂತಾಗಿತ್ತು. ಶುಕ್ರವಾರದ ಮಳೆ ಅಬ್ಬರದಿಂದ ಇನ್ನೂ ಚೇತರಿಸಿಕೊಂಡಿರದ ಜನತೆ ಈಗ ಮತ್ತೆ ಆರಂಭವಾಗಿರುವ ಮಳೆಗೆ ಆತಂಕಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss