ರಾಜಸ್ತಾನಕ್ಕೆ ತೆರಳಿದ್ದ ಯುವಕರು ಮರಳಿ ಗೂಡಿಗೆ: ಆರೋಗ್ಯ ತಪಾಸಣೆ, ವಸತಿ ವ್ಯವಸ್ಥೆ ಮಾಡಿದ ತಹಶಿಲ್ದಾರ್

0
87

ಹಾವೇರಿ: ರಾಜಸ್ತಾನಕ್ಕೆ ದುಡಿಯಲು ಹೋಗಿದ್ದ ‌ಜಿಲ್ಲೆಯ ಶಿಗ್ಗಾವ ತಾಲೂಕಿನ ತಿಮ್ಮಾಪೂರ ಗ್ರಾಮದ 44 ಜನರು ಇಂದು ಬೆಂಗಳೂರಿನಿಂದ ಜಿಲ್ಲೆಯ ರಾಣೇಬೆನ್ನೂರಿನ ಮಾಕನೂರ ಮಾರ್ಗವಾಗಿ ಗ್ರಾಮಕ್ಕೆ ಆಗಮಿಸಿದರು.

ಹೊರ ರಾಜ್ಯದಿಂದ ‌ಗ್ರಾಮಕ್ಕೆ ಇಷ್ಟೊಂದು ಜನ ಆಗಮಿಸಿರುವ ವಿಷಯ ತಿಳಿದ ತಹಶೀಲ್ದಾರ ತಕ್ಷಣ ಅವರನ್ನು ಆರೋಗ್ಯ ತಪಾಸಣಾ ಕೇಂದ್ರಕ್ಕೆ ಕರೆತಂದು ಅವರನ್ನು ತಪಾಸಣೆಗೆ ಒಳಪಡಿಸಿದ್ದಾರೆ.

ಸದ್ಯ ಇವರಿಗೆ ಶಿಗ್ಗಾಂವ ಪಟ್ಟಣದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಹಶಿಲ್ದಾರ ಪ್ರಕಾಶ ಕುದರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here