ಅಬುಧಾಬಿ: ಐಪಿಎಲ್ನ 12ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗೆಲುವಿಗಾಗಿ 174 ರನ್ಗಳ ಮೊತ್ತ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಕೆಕೆಆರ್ಗೆ ಶುಬ್ಮನ್ ಗಿಲ್ ಹಾಗೂ ನರೈನ್ 36 ರನ್ಗಳ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿಕೊಟ್ಟರು. ಆದರೆ ಸುನೀಲ್ ನರೈನ್ ಇಂದಿನ ಪಂದ್ಯದಲ್ಲೂ ಕೇವಲ 15 ರನ್ಗಳಿಗೆ ವಿಕೆಟ್ ಒಪ್ಪಿಸಿ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ನಂತರ ಬಂದ ನಿತೀಶ್ ರಾಣಾ 2ನೇ ವಿಕೆಟ್ಗೆ ಗಿಲ್ ಜೊತೆ 46 ರನ್ ಸೇರಿಸಿದರುಇವರ ಬೆನ್ನಲ್ಲೇ 34 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 47 ರನ್ಗಳಿಸಿದ್ದ ಗಿಲ್ ಕೂಡ ಆರ್ಚರ್ ಬೌಲಿಂಗ್ನಲ್ಲಿ ಅವರಿಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ನಾಯಕ ದಿನೇಶ್ ಕಾರ್ತಿಕ್ ೧ ರನ್ ಗೆ ಔಟ್ ಆದರೆ , ಬಳಿಕ ಬಂದ ರಸೆಲ್ 14 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 24 ರನ್ಗಳಿಸಿ ರಜಪೂತ್ ಬೌಲಿಂಗ್ನಲ್ಲಿ ವಿಕೆಟ್ ಉನಾದ್ಕಟ್ಗೆ ಕ್ಯಾಚ್ ನೀಡಿ ಔಟಾದರು.
ಆದರೆ ಕೊನೆಯ ಓವರ್ಗಳಲ್ಲಿ ಅಬ್ಬರಿಸಿದ ಇಯಾನ್ ಮಾರ್ಗನ್ 23 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 34 ರನ್ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಪ್ಯಾಟ್ ಕಮ್ಮಿನ್ಸ್ 12 ರನ್ಗಳಿಸಿದರೆ, ನಾಗರಕೋಟಿ 8 ರನ್ಗಳಿಸಿ ಔಟಾಗದೆ ಉಳಿದರು. ಕೆಕೆಆರ್ ಒಟ್ಟಾರೆ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ಗಳಿಸಿತು.
ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್ 2 ವಿಕೆಟ್ ಪಡೆದರೆ, ಅಂಕಿತ್ ರಜಪೂತ್ 1, ಉನಾದ್ಕಟ್ 1, ಟಾಮ್ ಕರ್ರನ್ 1, ಹಾಗೂ ರಾಹುಲ್ ತೆವಾಟಿಯಾ 1 ವಿಕೆಟ್ ಪಡೆದರು.