Monday, July 4, 2022

Latest Posts

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ಪರಿಸರಸ್ನೇಹಿ ಹಸಿರು ಪಿಪಿ ಕಿಟ್

ತುಮಕೂರು: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ಪರಿಸರಸ್ನೇಹಿ ಹಸಿರು ಪಿಪಿ ಕಿಟ್ಟು ಸಿದ್ಧಪಡಿಸಲಾಗುತ್ತಿದೆ ಎಂದು ವಿವಿಯ ಕುಲಪತಿ ಡಾ.ಸಚ್ಚಿದಾನಂದ ಅವರು ತಿಳಿಸಿದರು.
ತುಮಕೂರು ಸಿದ್ದಾರ್ಥ ವೈದ್ಯಕೀಯ ವಿವಿ ಘಟಿಕೋತ್ಸವಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡುತ್ತ ಅದಷ್ಟೂ ಬೇಗ ಈ ಪರಿಸರ ಸ್ನೇಹಿ ಹಸಿರು ಪಿಪಿ ಕಿಟ್ಟನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದರು.
ಕೊವಿಡ್ ಸೋಂಕಿಗೆ ಒಳಗಾದವರು ಮರಣಕ್ಕೆ ಹೃದ್ರೋಗವೂ ಕಾರಣವಾಗುತ್ತಿದೆ.ಸೋಂಕಿನಿಂದ ಗುಣಮುಖರಾದವರೂ ಸಹ ಹೃದಯಾಘಾತದಿಂದ ಸಾವನಪ್ಪುತ್ತಿರುವುದು ಕಂಡು ಬಂದಿದ್ದು. ಹೃದಯ ಸಮಸ್ಯೆ ಕಂಡುಬಂದ ಕೂಡಲೇ ಹೃದ್ರೋಗ ತಜ್ಞರ ಬಳಿ ಹೋಗಬೇಕು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss