Wednesday, July 6, 2022

Latest Posts

ರಾಜ್ಯಕ್ಕೆ 3500 ಕೋಟಿ ರೂ.ಯೋಜನೆ ನಿರೀಕ್ಷೆ: ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಅಂಕೋಲಾ : ಕೇಂದ್ರ ಸರ್ಕಾರದ ಮತ್ಸ್ಯ ಕ್ರಾಂತಿ ಯೋಜನೆಯಡಿ ರಾಜ್ಯಕ್ಕೆ ೩೫೦೦ ಕೋಟಿ ರೂ. ಸಿಗುವ ನಿರೀಕ್ಷೆಯಿದ್ದು, ಮುಂಬರುವ ಐದು ವರ್ಷಗಳಲ್ಲಿ ಮೀನುಗಾರರಿಗೆ ಶಾಶ್ವತ ಮೀನುಗಾರಿಕೆಗೆ ಅನುಕೂಲಕರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಂದರು ಮತ್ತು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಭಾನುವಾರ ಇಲ್ಲಿಯ ಬೆಳಂಬಾರ, ಕೇಣಿ, ಬೇಲೆಕೇರಿ ಮೀನುಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ ಕಡಲಕೊರೆತ, ಜಟ್ಟಿ ನಿರ್ಮಾಣ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೊರೋನಾ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸರ್ಕಾರದ ಘೋಷಿಸಿರುವ ಪ್ಯಾಕೆಜ್‌ನಲ್ಲಿ ಮತ್ಸ್ಯ ಕ್ರಾಂತಿ ( ನೀಲಿ ಕ್ರಾಂತಿ) ಯೋಜನೆಗೆ ದೇಶಕ್ಕೆ ೨೦, ೦೦೦ ಕೋಟಿ ಹಣ ಘೋಷಿಸಲಾಗಿದೆ. ಇದರಲ್ಲಿ ರಾಜ್ಯಕ್ಕೆ ೩೫೦೦ ಕೋಟಿ ರೂ. ನಿರೀಕ್ಷೆ ಮಾಡಲಾಗಿದೆ. ಮೀನುಗಾರರ ಸಲಹೆ ಪಡೆದು ಒಳನಾಡು ಮತ್ತು ಕಡಲ ಕಿನಾರೆ ಮೀನುಗಾರಿಕೆಗೆ ಶಾಶ್ವತ ಉಪಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಸಬ್ಸಿಡಿ ಬಿಡುಗಡೆ
ಮೀನುಗಾರರ ಉಳಿತಾಯ ಪರಿಹಾರ ಬಿಡುಗಡೆಗಾಗಿ ಕೇಂದ್ರ ಮತ್ತು ರಾಜ್ಯದಿಂದ ತಲಾ ೫೦೦ ಕೋಟಿ ರೂ. ಬಿಡುಗಡೆ ಆಗಿದೆ. ಅದೇ ರೀತಿ ಡಿಸೆಲ್ ಸಬ್ಸಿಡಿ ಹಣ ಸಹ ಬಾಕಿ ಇದೆ. ಇವೆರಡನ್ನು ವಾರದಲ್ಲಿ ಮೀನುಗಾರರ ಖಾತೆಗೆ ಜಮಾ ಮಾಡಲಾಗುವುದು ಎಂದರು. ಮೀನುಗಾರರ ಸಾಲ ಮನ್ನಾಕ್ಕಾಗಿ ಈಗಾಗಲೇ ಯಡಿಯೂರಪ್ಪ ಸರ್ಕಾರ ೬೦ ಕೋಟಿ ರೂ. ಬಿಡುಗಡೆ ಮಾಡಿದೆ. ಇದೂ ಸಹ ಶೀಘ್ರ ಮೀನುಗಾರರ ಖಾತೆಗೆ ಜಮಾ ಆಗಲಿದೆ ಎಂದರು. ಶಾಸಕಿ ರೂಪಾಲಿ ನಾಯ್ಕ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss