ಹೊಸದಿಗಂತ ಆನ್ ಲೈನ್ ಡೆಸ್ಕ್:
ರಾಜ್ಯದಲ್ಲಿಂದು 1,870 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8,76,425ಕ್ಕೆ ಏರಿಕೆ ಆಗಿದೆ.
ಇನ್ನು ಇಂದುಕೊರೋನಾಗೆ 17 ಸೋಂಕಿತರು ಮೃತರಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ 11,695ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೊರೋನಾದಿಂದ 1,949 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 8,40,099 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಶೇಕಡಾ 1.58ರಷ್ಟು ಹಾಗೂ ಸಾವಿನ ಪ್ರಮಾಣ ಶೇಕಡಾ 0.91ರಷ್ಟಿದೆ. ಸದ್ಯ 24,612 ಸಕ್ರಿಯ ಪ್ರಕರಣಗಳಿವೆ.