Monday, July 4, 2022

Latest Posts

ರಾಜ್ಯದಲ್ಲಿಯೂ ಲವ್ ಜಿಹಾದ್ ತಡೆಯುವ ಮಸೂದೆ ಮಂಡನೆ: ನಳಿನ್ ಕುಮಾರ್ ಕಟೀಲು

ಹೊಸದಿಗಂತ ವರದಿ ಶಿವಮೊಗ್ಗ:

ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯದಲ್ಲಿಯೂ ಲವ್ ಜಿಹಾದ್ ತಡೆಯುವ ಬಗ್ಗೆ ಮಸೂದೆ ಮಂಡನೆ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲು ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಸಭೆಯಲ್ಲಿ ಗೋಹತ್ಯೆ ತಡೆ ಮಸೂದೆ ಹಾಗೂ ಲವ್ ಜಿಹಾದ್ ತಡೆ ಮಸೂದೆ ಜಾರಿ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿತ್ತು. ಅದರಂತೆ ಈಗಾಗಲೇ ಗೋಹತ್ಯೆ ತಡೆ ಮಸೂದೆ ಮಂಡನೆ ಮಾಡಲಾಗಿದೆ. ಸದ್ಯ ಸುಗ್ರೀವಾಜ್ನೆ ಮೂಲಕ ಜಾರಿಗೆ ತರಲಾಗಿದೆ. ಮುಂದಿನ ಅಧಿವೇಶನದ ಹೊತ್ತಿಗೆ ಲವ್ ಜಿಹಾದ್ ತಡೆ ಮಸೂದೆಯನ್ನೂ ಮಂಡನೆ ಮಾಡಲಾಗುವುದು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss