Wednesday, August 10, 2022

Latest Posts

ರಾಜ್ಯದಲ್ಲಿ ಅನ್​ಲಾಕ್​ 3 ಮಾರ್ಗಸೂಚಿ ಬಿಡುಗಡೆ: ನೈಟ್ ಕರ್ಫ್ಯೂ , ಸಂಡೇ ಲಾಕ್ ಡೌನ್ ರದ್ದು!

ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್​​ 1ರಿಂದ ಮೂರನೇ ಹಂತದ ಅನ್​ಲಾಕ್​ ಜಾರಿಗೆ ಬರಲಿದೆ. ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿದ್ದು, ರಾಜ್ಯದಲ್ಲಿ ಹೇರಿಕೆ ಮಾಡಿದ್ದ ನೈಟ್ ಕರ್ಫ್ಯೂ ಮತ್ತು ಸಂಡೇ ಲಾಕ್ ಡೌನ್ ರದ್ದುಗೊಳಿಸಿದೆ. ಆಗಸ್ಟ್ 1 ರಿಂದ ರಾಜ್ಯದಲ್ಲಿ ಈ ನಿಯಮ ಅನುಷ್ಠಾನಕ್ಕೆ ಬರಲಿದೆ.
ಆಗಸ್ಟ್ 5ರಿಂದ ಜಾರಿಗೆ ಬರುವಂತೆ ರಾಜ್ಯದಲ್ಲಿ ಜಿಮ್ ಮತ್ತು ಯೋಗ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿದೆ. ಕಂಟೈನ್‌ಮೆಂಟ್ ವಲಯ ಬಿಟ್ಟು ಹೊರಗಡೆ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.
ಅಂತಾರಾಜ್ಯ ಹಾಗೂ ಅಂತರ್ ಜಿಲ್ಲಾ ಪ್ರಯಾಣಕ್ಕೆ ಯಾವುದೇ ನಿರ್ಬಂಧಗಳಿಲ್ಲ.
ಶಾಲಾ-ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು ಆಗಸ್ಟ್ 31ರವರೆಗೆ ತೆರೆಯುವಂತಿಲ್ಲ.
ಸಿನಿಮಾ ಮಂದಿರಗಳು, ಈಜು ಕೊಳ, ಮನರಂಜನಾ ಪಾರ್ಕ್, ಚಿತ್ರಮಂದಿರ, ಬಾರ್, ಸಭಾ ಭವನಗಳಿಗೆ ನಿರ್ಬಂಧ ಮುಂದುವರೆದಿದೆ.
ಅಂತಾರಾಷ್ಟ್ರೀಯ ವಿಮಾನ ಹಾರಾಟ, ಮೆಟ್ರೋ ರೈಲು, ಧಾರ್ಮಿಕ ಸಭೆ, ಸಾರ್ವಜನಿಕ ಸಭೆ-ಸಮಾರಂಭಕ್ಕೆ ಅವಕಾಶ ಇರುವುದಿಲ್ಲ.  ಯಾವುದೇ ವಿಶೇಷ ಅನುಮತಿ, ಪಾಸ್​ಗಳ ಅಗತ್ಯ ಇರುವುದಿಲ್ಲ. ಆದರೆ ರಾಜ್ಯಕ್ಕೆ ಬರುವ ಪ್ರಯಾಣಿಕರು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗಸೂಚಿಯನ್ನು ಅನುಸರಿಸಬೇಕು.
ಮದುವೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು 50 ಜನರಿಗಿದ್ದ ಅವಕಾಶದ ವಿಚಾರದಲ್ಲಿ ಯಾವುದೇ ಸಡಿಲಿಕೆ ಮಾಡಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss