Sunday, August 14, 2022

Latest Posts

ರಾಜ್ಯದಲ್ಲಿ ಇಂದು 100 ಕೊರೋನಾ ಪ್ರಕರಣಗಳು: 2,282 ಮಂದಿ ಸೋಂಕಿತರು

ಬೆಂಗಳೂರು: ಇಂದು ರಾಜ್ಯದಲ್ಲಿ ಮಹಾಮಾರಿ ಕೊರೋನಾಗೆ 100 ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,282ಕ್ಕೆ ಏರಿಕೆಯಾಗಿದೆ.

ಚಿತ್ರದುರ್ಗ 20, ದಾವಣಗೆರೆ 11, ಯಾದಗಿರಿ 14, ಬೆಂಗಳೂರು 7, ಹಾಸನ 13, ವಿಜಯಪುರ 5, ಬೀದರ್ 10, ಬೆಳಗಾವಿ 13, ಉಡುಪಿ 2, ಬಳ್ಳಾರಿ 1, ಕೊಲಾರ 2, ಕೊಪ್ಪಳ 1, ಚಿಕ್ಕಬಳ್ಳಾಪುರ 1 ಪ್ರಕರಣಗಳು ಪತ್ತೆಯಾಗಿದೆ.

ಈವರೆಗೆ ರಾಜ್ಯದಲ್ಲಿ 722 ಮಮದಿ ಗುಣಮುಖರಾಗಿದ್ದು, 44 ಮಂದಿ ಮೃತಪಟ್ಟಿದ್ದಾರೆ. 2,282 ಮಂದಿ ಸೋಂಕಿತರಲ್ಲಿ 1,514 ಮಂದಿ ಸಕ್ರಿಯ ಸೋಂಕಿತರಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ರಾಜ್ಯದಲ್ಲಿ 17 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಅವರಲ್ಲಿ ಬೆಳಗಾವಿ 14, ಚಿಕ್ಕಬಳ್ಳಾಪುರ, ಉತ್ತರಕನ್ನಡ, ಕಲಬುರಗಿಯಲ್ಲಿ ತಲಾ ಒಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss