Wednesday, June 29, 2022

Latest Posts

ರಾಜ್ಯದಲ್ಲಿ ಇಂದು 13,408 ಜನರಿಗೆ ಲಸಿಕೆ: ಸಚಿವ ಡಾ.ಕೆ ಸುಧಾಕರ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇಂದು ರಾಜ್ಯದಲ್ಲಿ 13,408 ಜನ ಲಸಿಕೆ ಪಡೆದಿದ್ದಾರೆ. 30 ಜಿಲ್ಲೆಯ 243 ಕೇಂದ್ರಗಳಲ್ಲಿ ಲಸಿಕೆ ನೀಡಲಾಗಿದೆ ಎಂದು ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಇಂದು ಐತಿಹಾಸಿಕ ದಿನವಾಗಿದ್ದು, ಕೋವಿಡ್​ನಿಂದ ತತ್ತರಿಸಿ ಹೋಗಿದ್ದ ಜನರಿಗೆ ರಾಮಬಾಣ ಸಿಕ್ಕು ತೃಪ್ತಿ ಮತ್ತು ಸಂತೋಷವಾಗಿದೆ. ಇದಕ್ಕೆ ಕಾರಣ ಪ್ರಧಾನಿ ಮೋದಿಯ ನಾಯಕತ್ವದಲ್ಲಿ ಕೇವಲ ಲಸಿಕೆ 10 ತಿಂಗಳಲ್ಲಿ ಲಸಿಕೆ ರೆಕಾರ್ಡ್ ಸಮಯದಲ್ಲಿ ತಯಾರಾಗಿ ನೀಡಲಾಗುತ್ತಿರುವುದು ಎಂದು ತಿಳಿಸಿದರು.
ಗ್ರೂಪ್ ಡಿ ನೌಕರರು ಮೊದಲನೇ ಫಲಾನುಭವಿಗಳಾಗಲಿ ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿತ್ತು. ಈ ಹಿನ್ನೆಲೆ ರಾಜ್ಯದಲ್ಲಿ ನಾಗರತ್ನ ಅವರು ಮೊದಲ ಫಲಾನುಭವಿಯಾಗಿದ್ದಾರೆ. ಇಂದಿನ ಲಸಿಕಾ ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಂಡವರ ಪೈಕಿ ಶೇಕಡ 62ರಷ್ಟು ಜನ ಲಸಿಕೆ ಪಡೆದಿದ್ದಾರೆ ಎಂದು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ಅತೀ ಹೆಚ್ಚು ಶೇ 84ರಷ್ಟು ಜನ ಲಸಿಕೆ ಹಾಕಿಸಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ 80 ಹಾಗೂ ದಕ್ಷಿಣ ಕನ್ನಡದಲ್ಲಿ ಅತಿ ಕಡಿಮೆ ಅಂದರೆ ಶೇ 37ರಷ್ಟು ಜನ ಲಸಿಕೆಯನ್ನು ಪಡೆದಿದ್ದಾರೆ. 600 ಜನರ ಟಾರ್ಗೆಟ್ ನೀಡಲಾಗಿತ್ತು, ಆದರೆ 223‌ಜನರು ಮಾತ್ರ ಹಾಕಿಸಿಕೊಂಡಿದ್ದಾರೆ. ಕಡಿಮೆ ಪ್ರಮಾಣಕ್ಕೆ ಕಾರಣ ತಿಳಿದಿಲ್ಲ. ಹೆಚ್ಚು ವಿದ್ಯಾವಂತರು ಇರುವ ಜಿಲ್ಲೆ ದಕ್ಷಿಣ ಕನ್ನಡ. ಆ ಭಾಗದವರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು.
ಬೆಂಗಳೂರು ನಗರದಲ್ಲಿ ಶೇ 53 ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 65 ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ. ಮಲ್ಲಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಡಿಮೆ ಪ್ರಮಾಣ ಅಂದರೆ ಶೇ 28ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ.
ರಾಜ್ಯದಲ್ಲಿ 7.43 ಲಕ್ಷ ಮಂದಿಯನ್ನು ಗುರುತಿಸಿದ್ದು, 8 ಲಕ್ಷ ಲಸಿಕೆ ಬಂದಿದೆ. ಇನ್ನೂ 8 ಲಕ್ಷ ಲಸಿಕೆ ಕಳುಹಿಸಿ ಕೊಡಬೇಕೆಂದು ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss