Monday, August 15, 2022

Latest Posts

ರಾಜ್ಯದಲ್ಲಿ ಇಂದು 4,752 ಜನರಿಗೆ ಕೊರೋನಾ ಪಾಸಿಟಿವ್, 98 ಜನರು ಸಾವು, 4776 ಮಂದಿ ಸೋಂಕಿನಿಂದ ಗುಣಮುಖ

ಬೆಂಗಳೂರು : ರಾಜ್ಯದಲ್ಲಿ ಇಂದು ಹೊಸದಾಗಿ 4,752 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1,39,571ಕ್ಕೆ ಏರಿಕೆಯಾಗಿದೆ.
ಇಂದು ಕೊರೋನಾ ಸೋಂಕಿತರಾದಂತ 98 ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 2,594ಕ್ಕೆ ಏರಿಕೆಯಾಗಿದೆ.
ಇಂದು ಬೆಂಗಳೂರು ನಗರ 1497, ಮೈಸೂರು 372, ಬಳ್ಳಾರಿ 305, ಬಾಗಲಕೋಟೆ 209, ಧಾರವಾಡ  191, ಕಲಬುರ್ಗಿ 170, ಕೊಪ್ಪಳ 157, ಶಿವಮೊಗ್ಗ 155, ದಕ್ಷಿಣ ಕನ್ನಡ 153, ಮಂಡ್ಯ 152, ಹಾಸನ 131, ಉಡುಪಿ  126, ತುಮಕೂರು  122, ರಾಯಚೂರು115, ಗದಗ 100, ಹಾವೇರಿ 99, ವಿಜಯಪುರ 92, ಯಾದಗಿರಿ 86, ರಾಮನಗರ 68, ಬೆಳಗಾವಿ  60, ಚಿಕ್ಕಬಳ್ಳಾಪುರ  58, ಚಾಮರಾಜನಗರ  52, ಬೀದರ್ 50, ಚಿಕ್ಕಮಗಳೂರು  46, ದಾವಣಗೆರೆ 41, ಕೋಲಾರ  40, ಕೊಡಗು  39, ಚಿತ್ರದುರ್ಗ 33, ಉತ್ತರ ಕನ್ನಡ 31 ಮತ್ತು ಬೆಂಗಳೂರು ಗ್ರಾಮಾಂತರ  02  ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 4776 ಮಂದಿ ಸೋಂಕಿನಿಂದ ಗುಣಮುಖರಾಗಿ, ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಗುಣಮುಖರಾದವರ ಸಂಖ್ಯೆ 62,500ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟು 74469 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 629 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss