Wednesday, August 10, 2022

Latest Posts

ರಾಜ್ಯದಲ್ಲಿ ಇಂದು 5,536 ಜನರಿಗೆ ಕೊರೋನಾ ಪಾಸಿಟಿವ್, 2,819 ಮಂದಿ ಸಂಪೂರ್ಣ ಗುಣಮುಖ, 102 ಜನ ಬಲಿ

ಬೆಂಗಳೂರು: ರಾಜ್ಯದಲ್ಲಿ ಇಂದು 5,536 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿವೆ. ಸೋಂಕಿತರ ಸಂಖ್ಯೆ 1,07001ಕ್ಕೆ ಏರಿಕೆಯಾಗಿದೆ.
ಇಂದು ಒಂದೇ ದಿನ ದಾಖಲೆಯ 102 ಜನ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 2,055ಕ್ಕೆ ಏರಿಕೆಯಾಗಿದೆ.
ಬೆಂಗಳೂರು ನಗರ  1898, ಬಳ್ಳಾರಿ 452, ಕಲಬುರ್ಗಿ  283, ಬೆಳಗಾವಿ  228, ಮೈಸೂರು 220, ತುಮಕೂರು 207, ಕೋಲಾರ  174, ದಕ್ಷಿಣ ಕನ್ನಡ 173, ಧಾರವಾಡ  173, ವಿಜಯಪುರ  153, ಕೊಪ್ಪಳ 144, ದಾವಣಗೆರೆ  135, ಬಾಗಲಕೋಟೆ 115, ಉಡುಪಿ 109, ಹಾಸನ 108, ಬೆಂಗಳೂರು ಗ್ರಾಮಾಂತರ 107, ರಾಮನಗರ 101, ಮಂಡ್ಯ 96, ರಾಯಚೂರು 93, ಗದಗ  73, ಚಿಕ್ಕಬಳ್ಳಾಪುರ  72, ಯಾದಗಿರಿ  67, ಚಿತ್ರದುರ್ಗ 66, ಚಿಕ್ಕಮಗಳೂರು 55, ಶಿವಮೊಗ್ಗ  54, ಚಾಮರಾಜನಗರ  52, ಉತ್ತರ ಕನ್ನಡ 47, ಹಾವೇರಿ  40, ಬೀದರ್  39 ಮತ್ತು ಕೊಡಗು  02 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 2,819 ಮಂದಿ ಸಂಪೂರ್ಣ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಒಟ್ಟು 40,504 ಮಂದಿ ಚೇತರಿಸಿಕೊಂಡಂತಾಗಿದೆ. ಸದ್ಯ ರಾಜ್ಯದಲ್ಲಿ ಒಟ್ಟು 64,434 ಸಕ್ರಿಯ ಪ್ರಕರಣಗಳಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss