Wednesday, August 10, 2022

Latest Posts

ರಾಜ್ಯದಲ್ಲಿ ಇಂದು 9725 ಜನರಿಗೆ ಕೊರೋನಾ ಪಾಸಿಟಿವ್ , 6,583 ಮಂದಿ ಗುಣಮುಖ

ಬೆಂಗಳೂರು: ರಾಜ್ಯದಲ್ಲಿ ಇಂದು 9725 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 4,84,990 ಕ್ಕೆ ಏರಿಕೆಯಾಗಿದೆ.ರಾಜ್ಯದಲ್ಲಿ ಇಂದು 70 ಜನ ಸೋಂಕಿತರು ಮೃತಪಟ್ಟಿದ್ದು , ಈ ಮೂಲಕ ಇದುವರೆಗೆ 7536 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯಲ್ಲಿ 6,583 ಮಂದಿ ಡಿಸ್ಚಾರ್ಜ್ ಆಗಿದ್ದು, ಇದುವರೆಗೆ ರಾಜ್ಯದಲ್ಲಿ 375809 ಜನರು ಡಿಸ್ಚಾರ್ಜ್ ಆಗಿದ್ದಾರೆ. 101626 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಪತ್ತೆಯಾಗಿದ ಕೊರೋನಾ ಸೋಂಕಿನಲ್ಲಿ , ಬೆಂಗಳೂರು 3571, ಬಾಗಲಕೋಟೆ 158, ಬಳ್ಳಾರಿ 381, ಬೆಳಗಾವಿ 258, ಬೆಂಗಳೂರು ಗ್ರಾಮಾಂತರ 168, ಬೀದರ್ 52, ಚಾಮರಾಜನಗರ 65, ಚಿಕ್ಕಬಳ್ಳಾಪುರ 149, ಚಿಕ್ಕಮಗಳೂರು 171, ಚಿತ್ರದುರ್ಗ 227, ದಕ್ಷಿಣ ಕನ್ನಡ 466, ದಾವಣಗೆರೆ 213, ಧಾರವಾಡ 246, ಗದಗ 108, ಹಾಸನ 308, ಹಾವೇರಿ 81, ಕಲಬುರಗಿ 221, ಕೊಡಗು 41, ಕೋಲಾರ 101, ಕೊಪ್ಪಳ 152, ಮಂಡ್ಯ 182, ಮೈಸೂರು 748, ರಾಯಚೂರು 193, ರಾಮನಗರ 62, ಶಿವಮೊಗ್ಗ 293, ತುಮಕೂರು 401, ಉಡುಪಿ 191, ಉತ್ತರ ಕನ್ನಡ 294, ವಿಜಯಪುರ 115, ಯಾದಗಿರಿ 109 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss