Thursday, March 4, 2021

Latest Posts

ರಾಜ್ಯದಲ್ಲಿ ಇನ್ಮುಂದೆ ‘ಕೈ’ ಸಿಎಂ ಅಸಾಧ್ಯ: ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯ

ಹೊಸದಿಗಂತ ವರದಿ, ಧಾರವಾಡ:

ದೇಶ-ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮ ಆಗುತ್ತಿದೆ. ಇಂಥ ವೇಳೆ ಡಿ.ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯರ ಮಧ್ಯೆ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆದಿದೆ. ಆದರೆ, ರಾಜ್ಯದಲ್ಲಿ ಇನ್ಮುಂದೆ ಕಾಂಗ್ರೆಸ್ ಮುಖ್ಯಮಂತ್ರಿ ಅಸಾಧ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.

ಶನಿವಾರ ಜಿಲ್ಲಾ ಪಂಚಾಯತಿ ನೂತನ ಆಡಳಿತ ಭವನಕ್ಕೆ ಲೋಕಾರ್ಪಣೆಗೊಳಿಸಿದ ನಂತರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಕರ್ನಾಟಕದ ಮುಖ್ಯಮಂತ್ರಿ ಆಗುವ ಬಗ್ಗೆ ಹಗಲಗನಸು ಕಾಣುತ್ತಿದ್ದಾರೆ ಎಂದು ಕಿಚಾಯಿಸಿದರು.

ಕರ್ನಾಟಕದಲ್ಲಿ ಇನ್ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಭವಿಷ್ಯ ನುಡಿದ ಸಚಿವ ಈಶ್ವರಪ್ಪ, ಮಾತು ಮಾತಿಗೂ ಧಮ್ ಪದ ಬಳಸುವ ಡಿ.ಕೆ. ಶಿವಕುಮಾರಗೆ ಅದೇ ಧಮ್ ಇದ್ದರೆ, ಮುಂದಿನ ಸಿಎಂ ನಾನೇ ಎಂಬ ಹೇಳಿಕೆ ಕೊಡುವ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸವಾಲ್ ಹಾಕಿದರು.

ಮುಖ್ಯಮಂತ್ರಿ ಯಾರೆಂದು? ಹೈಕಮಾಂಡ್, ಪಕ್ಷದ ಶಾಸಕರು ನಿರ್ಧರಿಸುವುದು ಬೇಡವೇ? ಡಿ.ಕೆ.ಶಿವಕುಮಾರಗೆ ಧರ್ಯ ಇದ್ದರೆ, ನಾನೇ ಮುಂದಿನ ಸಿಎಂ ಸೇರಿದಂತೆ ಬಾಯಿಗೆ ಬಂದಂತೆ ಹೇಳುವ ಸಿದ್ದರಾಮಯ್ಯರ ಸರ್ವಾಧಿಕಾರಿ ದೋರಣೆ ವಿರುದ್ಧ ಕ್ರಮ‌ಕೈಗೊಂಡು, ಅವರ ಬಾಯಿ ಮುಚ್ಚಿಸುವ ಕೆಲಸ ಮಾಡಲಿ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ವ್ಯವಸ್ಥೆ ಸರಿಯಿಲ್ಲ. ಉಸಿರುಗಟ್ಟುವ ವಾತಾವರಣದಲ್ಲಿ ಇರಲು ಯಾರು ಇಷ್ಟಪಡಲ್ಲ. ಈ ಕಾರಣಕ್ಕೆ ಆ ಪಕ್ಷದ ನಾಯಕರು-ಮುಖಂಡರು ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ ಎಂದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!