ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾಗೆ ಇಂದು ಮತ್ತೇ 12 ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ರಾಜ್ಯದಲ್ಲಿ 371ಕ್ಕೇರಿದ ಸೋಂಕಿತರ ಸಂಖ್ಯೆ
ವಿಜಯಪುರದಲ್ಲಿ ಇಂದು ಮತ್ತೆ ಒಬ್ಬರಿಗೆ ಕೊರೋನಾ ಸೋಂಕು ಹರಡಿದೆ. ಮಂಡ್ಯದಲ್ಲಿ ಪಿ.134 ಪಿ.138 ಸಂಪರ್ಕದಲ್ಲಿದ್ದ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಗದಗ ಹಾಗೂ ವಿಜಯಪುರದಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದೆ. ಕಲಬುರಗಿಯಲ್ಲಿ ಎರಡು ಹೊಸ ಸೋಂಕು ಪತ್ತೆಯಾಗಿದೆ.
ಮೈಸೂರಿನಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ಇಂದು ಮತ್ತೇ ಮೂರು ಮಂದಿಗೆ ಸೋಂಕು ತಗುಲಿದೆ. ಹಿನ್ನಲೆ ಜಿಲ್ಲೆಯಲ್ಲಿ ಪೀವರ್ ಕ್ಲೀನಿಕ್ ಆರಂಭ ಮಾಡಲಾಗುತ್ತದೆ. ಬಾಗಲಕೋಟೆಯಲ್ಲಿ ಮತ್ತೆ ಇಬ್ಬರಿಗೆ ಕೊರೋನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗದಲ್ಲಿ ಒಬ್ಬರಿಗೆ ಕೊರೋನಾ ಪಿಡುಗು ಖಚಿತವಾಗಿದೆ.
ಇದರಿಂದ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 371ಕ್ಕೆ ಏರಿಕೆಯಾಗಿದೆ.