Thursday, August 11, 2022

Latest Posts

ರಾಜ್ಯದಲ್ಲಿ ಗೋಹತ್ಯೆ ನಿಷೇಧದ ಬಳಿಕ ದಾಖಲಾಯಿತು ಮೊದಲ ಪ್ರಕರಣ

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ಬಳಿಕ ಮೊದಲ ಬಾರಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದೇ ದಿನ 2 ಪ್ರಕರಣಗಳು ದಾಖಲಾಗಿವೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮಾರ್ಗವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಶುಕ್ರವಾರ ಬೆಳಗಿನ ಜಾವ 2 ಕ್ಯಾಂಟರ್​​​ಗಳಲ್ಲಿ ಹತ್ತಾರು ಜಾನುವಾರುಗಳನ್ನು ಸಾಗಣೆ ಮಾಡುವ ವೇಳೆ ಶೃಂಗೇರಿಯ ತನಿಕೋಡು ಚೆಕ್ ಪೋಸ್ಟ್ ಬಳಿ ಪೊಲೀಸರು ವಾಹನ ತಡೆದು ಜಾನುವಾರುಗಳನ್ನು ಹಾಗೂ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು 2 ಕ್ಯಾಂಟರ್​​​ಗಳ ಪೈಕಿ ಒಂದು ಕ್ಯಾಂಟರ್​​​ನ ಚಾಲಕ ಪರಾರಿಯಾಗಿದ್ದು, ಇನ್ನೋರ್ವ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.
ಇವರು ರಾಣೆಬೆನ್ನೂರು ಸುತ್ತಮುತ್ತ ಜಾನುವಾರುಗಳನ್ನು ಖರೀದಿಸಿ ಅವುಗಳನ್ನು 2 ಕ್ಯಾಂಟರ್​​​​ನಲ್ಲಿ ತುಂಬಿಸಿಕೊಂಡು ಶೃಂಗೇರಿಯ ತನಿಕೋಡು ಮಾರ್ಗವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಸಾಗಿಸುತ್ತಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಯ ಯುವಕರು ಶೃಂಗೇರಿಯ ತನಿಕೋಡು ಚೆಕ್​​ಪೋಸ್ಟ್ ಬಳಿ ಕಾದು ಕುಳಿತು ಕ್ಯಾಂಟರ್​​ಗಳನ್ನು ತಡೆದು ಚಾಲಕನ್ನು ಹಿಡಿದ್ದಿದ್ದಾರೆ.
ರಾಜ್ಯದಲ್ಲಿ ಜಾರಿಯಾಗಿರುವ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ – 2020 ರಡಿ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss