ಹೊಸ ದಿಗಂತ ಆನ್ ಲೈನ್ ಡೆಸ್ಕ್:
ನಾಳೆಯಿಂದ ರಾಜ್ಯದಲ್ಲಿ ಕೋವಿಡ್ ಲಸಿಕೆಯ 2ನೇ ಡೋಸ್ ನೀಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕೋವಿಡ್ ಲಸಿಕೆ ಮೊದಲ ಡೋಸ್ ಪಡೆದವರು, ಎರಡನೇ ಡೋಸ್ ಪಡೆಯುವುದರಲ್ಲಿ ಎರಡು- ಮೂರು ದಿನ ವ್ಯತ್ಯವಾದರೂ ಪರವಾಗಿಲ್ಲ. ಆದರೆ ಮೊದಲ ಡೋಸ್ ಪಡೆದವರು ಎರಡನೇ ಡೋಸ್ ಪಡೆಯುವುದು ಕಡ್ಡಾಯ. ಇಲ್ಲದಿದ್ದರೆ ರೋಗ ಪ್ರತಿಕಾಯಗಳು ಉತ್ಪತ್ತಿಯಾಗುವುದಿಲ್ಲ ಎಂದು ಆರೋಗ್ಯ ಇಲಾಖೆಯ ಉಪ ನಿರ್ದೇಶಕಿ ಡಾ| ಬಿ.ಎನ್. ರಜನಿ ತಿಳಿಸಿದ್ದಾರೆ.
ಕೋವಿಡ್ ಲಸಿಕೆ ಮೊದಲ ಡೋಸ್ ಜ. 16ಕ್ಕೆ ನೀಡಿದ್ದು, ಎರಡನೇ ಹಂತದ ಡೋಸ್ 28 ದಿನಗಳಲ್ಲಿ ನೀಡಬೇಕಿತ್ತು. ಆದರೆ ಫೆ. 15ರಿಂದ ರಾಜ್ಯದಲ್ಲಿ ಲಸಿಕೆ 2ನೇ ಡೋಸ್ ಆರಂಭವಾಗಲಿದೆ.