Saturday, August 13, 2022

Latest Posts

ರಾಜ್ಯದಲ್ಲಿ ಪುತ್ಥಳಿ ರಾಜಕಾರಣ ನಡೆಯದಿರಲಿ: ಸರ್ಕಾರದ ಮಧ್ಯ ಪ್ರವೇಶಕ್ಕೆ ಹೆಬ್ಬಾಳ್ಕರ್ ಆಗ್ರಹ

ಧಾರವಾಡ: ಬೆಳಗಾವಿ ಪೀರನವಾಡಿ ಪುತ್ಥಳಿ ಗಲಾಟೆ ದುರದೃಷ್ಟಕರ. ಈ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶಿಸಿ ಪರಿಹರಿಸಲು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ರಾಯಣ್ಣನ ತ್ಯಾಗ, ಬಲಿದಾನ ಒಂದಡೆ. ದೇಶ ಒಗ್ಗೂಡಿಸಿದ ಶಿವಾಜಿ ಮಹಾರಾಜ ಮತ್ತೊಂದಡೆ ಇಬ್ಬರು ವಿಶ್ವಮಾನವರು. ರಾಜ್ಯದಲ್ಲಿ ಪುತ್ಥಳಿ ರಾಜಕಾರಣಕ್ಕೆ ಅವಕಾಶ ನೀಡಬಾರದೆಂದು ಮನವಿ ಮಾಡಿದರು.
ಇಬ್ಬರು ಮಹನೀಯರು ದೇಶಕ್ಕಾಗಿ ದುಡಿದ ವೀರ ಪುತ್ರರು. ಈ ಮಹನೀಯರ ವಿಷಯದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಸಂಬಂಧಿಸಿದವರು ಶಾಂತ ರೀತಿಯಲ್ಲಿ ಸಂಧಾನ ಸಭೆ ನಡೆಸಿ ಇತ್ಯರ್ಥಪಡಿಸಿಕೊಳ್ಳಲು ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಬೇಕಿದೆ ಎಂದರು.
ಎಂಇಎಸ್ ಕೃತ್ಯದ ಬಗ್ಗೆ ಪ್ರತಿಕ್ರಿಸಿದ ಅವರು, ನಾನು ಮೊದಲಿಂದಲೂ ಎಂಇಎಸ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದೇನೆ. ನಾವೆಲ್ಲ ಅವರ ಪುಂಡಾಟಿಕೆ ಕಣ್ಣಾರೆ ಖಂಡಿದ್ದೇವೆ. ಅವರ ಕೃತ್ಯಗಳನ್ನು ಉಗ್ರವಾಗಿ ಖಂಡಿಸಿವುದಾಗಿ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss