Sunday, August 14, 2022

Latest Posts

ರಾಜ್ಯದಲ್ಲಿ ಭಾನುವಾರ 5,938 ಕೊರೋನಾ ಹೊಸ ಪ್ರಕರಣ: ಒಂದೇ ದಿನ 4,996 ಮಂದಿ ಗುಣಮುಖ

ಬೆಂಗಳೂರು: ಕೊರೋನಾ ತಾಂಡವ ರಾಜ್ಯದಲ್ಲಿ ಮುಂದುವರಿದಿದ್ದು, ಭಾನುವಾರ 5,938 ಹೊಸ ಪ್ರಕರಣಗಳು ಪತ್ತೆಯಾಗಿದೆ.
ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,77,814ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 68 ಮಂದಿ ಕೊರೋನಾ ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರೆ.
ಎಲ್ಲೆಲ್ಲಿ ಎಷ್ಟು ಪ್ರಕರಣ?
ಬೆಂಗಳೂರಿನಲ್ಲಿ 2,126, ಬಳ್ಳಾರಿ 406, ಬೆಳಗಾವಿ 136, ದಾವಣಗೆರೆ 265, ಕೊಪ್ಪಳ 256, ಶಿವಮೊಗ್ಗ 246, ಕಲಬುರಗಿ 203, ವಿಜಯಪುರ 134, ಹಾಸನ 196, ಧಾರವಾಡ 194, ಉಡುಪಿ 117, ದಕ್ಷಿಣ ಕನ್ನಡ 193, ಗದಗ 182, ಹಾವೇರಿ 150, ಬಾಗಲಕೋಟೆ 139, ತುಮಕೂರು 112, ಚಿಕ್ಕಮಗಳೂರು 126, ಮೈಸೂರು 92, ರಾಯಚೂರು 81, ಚಿತ್ರದುರ್ಗ 71, ಉತ್ತರ ಕನ್ನಡ 108 ಪ್ರಕರಣ ಭಾನುವಾರ ಪತ್ತೆಯಾಗಿದೆ. ರಾಜ್ಯದಲ್ಲಿ ಭಾನುವಾರ ಗುಣಮುಖರಾದವರ ಸಂಖ್ಯೆ 4,996. ಸಕ್ರಿಯವಾಗಿರುವ ಸಂಖ್ಯೆ 83,551.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss