ತುಮಕೂರು:ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಶೇ.75 ರಾಷ್ಟ್ರ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲಾಗುವುದು ಎಂದು ಗೃಹ ಸಚಿವ ಬಸವರಾಜಬೊಮ್ಮಾಯಿ ತಿಳಿಸಿ ದರು.
ಅವರು ಕೊರಟಗೆರೆಯಲ್ಲಿ ಬುಧವಾರ ಜನಸ್ನೇಹಿ ಪೊಲೀಸ್ ಠಾಣೆಯಲ್ಲೂ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪೊಲೀಸರ ಗೃಹ ನಿರ್ಮಾಣಕ್ಕೆ ಐದು ಸಾವಿರ ಕೋಟಿ ರೂಗಳನ್ನು ಮೀಸಲಿಡಲಾಗಿದೆ,2025ರ ವೇಳೆಗೆ ಇಲಾಖೆಯ ಅಗತ್ಯದ ಶೇ.75ರಷ್ಟು ಮನೆಗಳನ್ನು ನಿರ್ಮಿಸಿರುವ ಗುರಿ ಹೊಂದಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕೊವಿಡ್ ಪ್ರಕರಣವನ್ನು ಯಶಸ್ವಿಯಾಗಿ ನಿರ್ವಹಿಸಿದ ಜಿಲ್ಲೆಯ ಪೊಲೀಸ್ ಇಲಾಖೆಯ ಬಗ್ಗೆ ಮೆಚ್ಚುಗೆಯ ಮಾತುಗಳ ನ್ನು ಆಡಿದರು.ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ, ಮಾಜಿ ಗೃಹ ಸಚಿವ ರಾಗದ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ. ಮಾಜಿ ಸಚಿವ ಸೊಗಡು ಶಿವಣ್ಣ ,ಎಡಿಜಿಪಿ ಅಮರ್ ಕುಮಾರ್ ಪಾಂಡೆ, ಎಸ್. ಪಿ.ಡಾ.ಕೆ.ವಂಸಿಕೃಷ್ಣ ಉಪಸ್ಥಿತರಿದ್ದರು.