ಹೊಸದಿಗಂತ ಆನ್ಲೈನ್ ಡೆಸ್ಕ್:
ರಾಜ್ಯದಲ್ಲಿ ಯಾವುದೇ ಹಕ್ಕಿ ಜ್ವರ ಪ್ರಕರಣ ವರದಿಯಾಗಿಲ್ಲ, ಹೆಚ್ಚು ಆತಂಕ ಬೇಡ ಎಂದು ಪಶು ವೈದ್ಯಕೀಯ ಸಚಿವ ಪ್ರಭುಚವ್ಹಾಣ್ ಹೇಳಿದ್ದಾರೆ.
ರಾಜ್ಯದಲ್ಲಿ ಹಕ್ಕಿಜ್ವರ ವರದಿಯಾಗಿಲ್ಲದಿದ್ದರೂ, ನೆರೆ ರಾಜ್ಯ ಕೇರಳಾದಲ್ಲಿ ಹಕ್ಕಿ ಜ್ವರ ಕಂಡುಬಂದಿದೆ. ಹಾಗಾಗಿ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದಿದ್ದಾರೆ.
ಮಂಗಳೂರಿನಲ್ಲಿ ಕಾಗೆಗಳು, ಚಿಕ್ಕಬಳ್ಳಾಪುರದಲ್ಲಿ ವಲಸೆ ಹಕ್ಕಿಗಳ ಸಾವಿಗೆ ಜ್ವರ ಕಾರಣವಲ್ಲ ಎಂದು ವರದಿ ಬಂದಿದ್ದು, ಆತಂಕಪಡುವ ಅವಶ್ಯ ಇಲ್ಲ ಎಂದಿದ್ದಾರೆ.
ಶಿವಮೊಗ್ಗದಲ್ಲಿಯೂ ವಲಸೆ ಹಕ್ಕಿಗಳು ಮೃತಪಟ್ಟಿದ್ದು, ಅವುಗಳ ಅವಶೇಷಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದಾರೆ.