ಹೊಸದಿಗಂತ ವರದಿ,ಮೈಸೂರು:
ರಾಜ್ಯದಲ್ಲಿರುವ ಶಿವಶರಣರ ಜನ್ಮ ಸ್ಥಳಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಶನಿವಾರ ಮೈಸೂರಿನ ಜೆ.ಪಿ.ನಗರದಲ್ಲಿ ಜೆ.ಪಿ.ನಗರ ಶರಣರ ವೇದಿಕೆಯಿಂದ ನಿರ್ಮಿಸಲಾಗಿರುವ 11ಅಡಿ ಎತ್ತರದ ಅಕ್ಕಮಹಾದೇವಿ ಪ್ರತಿಮೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಅಕ್ಕ ಮಹಾದೇವಿ ಸೇರಿದಂತೆ ಅನೇಕ ಶರಣರಿಗೆ ಜನ್ಮ ನೀಡಿದೆ. ಅಕ್ಕಮಹಾದೇವಿ ಜನಿಸಿದ ಉಡುತಡಿಯ ಸ್ಥಳವನ್ನು ಶ್ರದ್ದಾ, ಭಕ್ತಿ, ಪ್ರವಾಸಿ ತಾಣವಾಗಿ, ಮುಂದಿನ ನೂರಾರು ವರ್ಷಗಳ ಕಾಲವೂ ಯವಪೀಳಿಗೆ ನೆನಪಿನಲ್ಲಿಟ್ಟುಕೊಳ್ಳುವಂತೆ ಸುಮಾರು 30ರಿಂದ 40 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ.
ಬಸವೇಶ್ವರರು ಜನಸಿದ ಬಸವ ಕಲ್ಯಾಣದಲ್ಲಿ 500 ಕೋಟಿ ರೂ ವೆಚ್ಚದಲ್ಲಿ ಭವ್ಯವಾದ ಕಟ್ಟಡ ವನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಇದರ ಜವಾಬ್ದಾರಿ ಯನ್ನು ರಾಜ್ಯ ಸಭಾ ಸದಸ್ಯರಾಗಿದ್ದ ಬಸವರಾಜ ಪಾಟೀಲ್ ಸೇಡಂ ಅವರಿಗೆ ನೀಡಲಾಗಿದೆ ಎಂದು ತಿಳಿಸಿದರು