Friday, July 1, 2022

Latest Posts

ರಾಜ್ಯದಲ್ಲಿ ಶೇ.0.05ರಷ್ಟು ಸಾವಿನ ಪ್ರಮಾಣ ಇಳಿಕೆ, ಶೇ.16.4ರಷ್ಟು ಜನರು ಗುಣಮುಖ: ಸಚಿವ ಡಾ.ಕೆ.ಸುಧಾಕರ್

ಮಂಗಳೂರು: ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಗುಣಮುಖರಾದವರ ಸಂಖ್ಯೆ ಹೆಚ್ಚಳವಾಗುತ್ತಿದೆ.
ರಾಜ್ಯದಲ್ಲಿ ಶೇ.0.05ರಷ್ಟು ಸಾವಿನ ಪ್ರಮಾಣ ಇಳಿಕೆಯಾಗಿದ್ದರೇ, ಶೇ.16.4ರಷ್ಟು ಜನರಿಗೆ ರೋಗನಿರೋಧಕ ಶಕ್ತಿ ಕೂಡ ಹೆಚ್ಚಿದೆ. ಇದುವರೆಗೆ ರಾಜ್ಯದಲ್ಲಿ ಶೇ.27.3ರಷ್ಟು ಜನರಿಗೆ ಕೊರೋನಾ ಸೋಂಕು ತಗುಲಿರುವುದಾಗಿ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಸೀರೋ ಸಮೀಕ್ಷೆಯ ಮಾಹಿತಿ ಬಹಿರಂಗ ಪಡಿಸಿದ ಅವರು, ಸಮೀಕ್ಷೆಗೆ ಒಳಪಡಿಸಿದಂತಹ 15,624 ಸೋಂಕಿತರ ಪೈಕಿ ಶೇ.16.4ರಷ್ಟು ಜನರಿಗೆ ರೋಗ ನಿರೋಧಕ ಶಕ್ತಿ ಬಂದಿದೆ.
ಮುಂಬೈ, ಪುಣೆ ಮತ್ತು ತಮಿಳುನಾಡಿನಲ್ಲಿ ಹೆಚ್ಚಿದೆ. ಸಕ್ರಿಯ ಸೋಂಕಿತರ ಪ್ರಮಾಣ ಶೇ. 12.7ರಷ್ಟಿದೆ. ಎರಡೂ ಸೇರಿ ಶೇ. 27.3ರಷ್ಟಿದೆ. ಮರಣ ಪ್ರಮಾಣ ಶೇ. 0.05 ಮಾತ್ರ ಇದೆ‌. ಮುಂಬೈ 0.10 ಇದೆ. ದೆಹಲಿ 0.09 ಇದೆ ಎಂದು ಹೇಳಿದರು.
ರಾಜ್ಯದ 30 ಜಿಲ್ಲೆಗಳಲ್ಲಿ ಸಿರೋ ಸರ್ವೆ ಮಾಡಲಾಗಿದೆ. ಮಾಡರೇಟ್ ರಿಸ್ಕ್ ಮತ್ತು ಹೈ ರಿಸ್ಕ್ ಇರುವ ಎರಡೂ ವಿಭಾಗಗಳ ಸೋಂಕಿತರ ಸರ್ವೆ ಮಾಡಲಾಗಿದೆ ಎಂದು ಹೇಳಿದರು.
ಬಳ್ಳಾರಿ ಮತ್ತು ಬೆಂಗಳೂರು ನಗರದಲ್ಲಿ ಸೋಂಕಿನ‌ ಪ್ರಮಾಣ ಹೆಚ್ಚಿದೆ. ಅದರಲ್ಲೂ ಬೆಂಗಳೂರು ಪಶ್ಚಿಮ ವಿಭಾಗದಲ್ಲಿ ಶೇ. 45 ಹಾಗೂ ದಕ್ಷಿಣ ವಿಭಾಗದಲ್ಲಿ ಶೇ‌. 39ರಷ್ಟು ಸೋಂಕಿನ ಪ್ರಮಾಣ ಇದೆ ಎಂದು ಹೇಳಿದರು.
ಎರಡನೇ ಹಂತದ ಸರ್ವೆ 
ಡಿಸೆಂಬರ್ ಅಂತ್ಯದಲ್ಲಿ ಹಾಗೂ ಫೆಬ್ರವರಿ, ಮಾರ್ಚ್​ಗೆ ಇನ್ನೂ ಎರಡು ಹಾಗೂ ಕೊನೆ ಹಂತದ ಸರ್ವೆ ಮಾಡಿಸಲಾಗುತ್ತದೆ ಎಂದು ತಿಳಿಸಿದರು. ಧಾರವಾಡದಲ್ಲಿ ಅತೀ ಕಡಿಮೆ ಸೋಂಕು ಪ್ರಮಾಣ ಅಂದರೆ ಶೇ. 8.7 ಇದೆ. ಗದಗ ಶೇ. 12, ಬಾಗಲಕೋಟೆ ಶೇ. 9 ಸೋಂಕು ಪ್ರಮಾಣ ಇದೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಆಗಿದೆ. ಆದರೂ ಪರೀಕ್ಷೆ ಪ್ರಮಾಣ ಹೆಚ್ಚಳ ಮಾಡಿದ್ದೇವೆ. ಮರಣ ಪ್ರಮಾಣವೂ ಕೂಡ‌ ಇಳಿಕೆಯಾಗಿದೆ ಎಂದು ಹೇಳಿದರು.ಸೋಂಕಿತರ ಸಂಖ್ಯೆ ನೋಡಿ‌ ಗಾಬರಿಯಾಗಬೇಕಿಲ್ಲ. ಸೂಕ್ತ ಚಿಕಿತ್ಸೆ ನೀಡಲು ನಾವು ಹೆಚ್ಚು ಗಮನ ವಹಿಸುತ್ತೇವೆ. ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss