Wednesday, August 17, 2022

Latest Posts

ರಾಜ್ಯದಲ್ಲಿ ‘ಹಸಿರು ಪಟಾಕಿ’ಯೊಂದಿಗೆ ದೀಪಾವಳಿ ಆಚರಣೆಗೆ ‘ಹೈಕೋರ್ಟ್ ಗ್ರೀನ್ ಸಿಗ್ನಲ್’

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯದಲ್ಲಿ ಕೊರೋನಾ ಭೀತಿ ಹಾಗೂ ಆರೋಗ್ಯದ ಹಿತದೃಷ್ಠಿಯಿಂದ ಪಟಾಕಿ ಮಾರಾಟಕ್ಕೆ ನಿಷೇಧ ಹೇರಲಾಗಿದ್ದು, ಇದರ ನಡುವೆ ರಾಜ್ಯ ಸರಕಾರ ದೀಪಾವಳಿಯಂದು ಹಸಿರು ಪಟಾಕಿ ಹಚ್ಚುವ ಮೂಲಕ, ಆಚರಿಸಲು ಅನುಮತಿ ನೀಡಲಾಗಿದೆ. ಇನ್ನು ಈ ಅನುಮತಿಗೆ ರಾಜ್ಯ ಹೈಕೋರ್ಟ್ ಕೂಡ ಗ್ರೀನ್ ಸಿಗ್ನಲ್ ನೀಡಿದೆ.
ನಾಳೆ ದೀಪಾವಳಿ ಹಬ್ಬ. ಇಂತಹ ಹಬ್ಬವನ್ನು ಹಸಿರು ಪಟಾಕಿಯೊಂದಿಗೆ ಆಚರಿಸುವಂತೆ ರಾಜ್ಯ ಹೈಕೋರ್ಟ್ ಷರತ್ತು ಬದ್ಧವಾಗಿ ಅನುಮತಿ ನೀಡಿದೆ. ಅಲ್ಲದೇ ಪೊಲೀಸರು ಪಟಾಕಿ ಮಳಿಗೆಗೆಳ ಹತ್ತಿರ ತೆರಳಿ, ಹಸಿರು ಪಟಾಕಿ ಮಾತ್ರವೇ ಮಾರಾಟ ಮಾಡಲಾಗುತ್ತಿದ್ಯಾ ಅಂತ ಪರಿಶೀಲಿಸುವಂತೆಯೂ ಸೂಚಿಸಿದೆ.
ಇನ್ನು ಪಟಾಕಿ ಬಾಕ್ಸ್ ನಲ್ಲಿ ಹಸಿರು ಚಿನ್ನೆ, NEERI ಸಂಸ್ಥೆ ದೃಢೀಕರಣ ಇರಬೇಕು ಎಂಬುದಾಗಿ ಸೂಚಿಸಿರುವಂತ ಹೈಕೋರ್ಟ್, ಹಸಿರು ಪಟಾಕಿಯೊಂದಿಗೆ ದೀಪಾವಳಿ ಹಬ್ಬ ಆಚರಿಸುವಂತೆ ವ್ಯಾಪಕ ಪ್ರಚಾರ ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಅಲ್ಲದೇ ಬೇರೆ ಪಟಾಕಿ ಬಳಕೆಯಾಗದಂತೆ ಕ್ರಮ ಕೈಗೊಳ್ಳುವಂತೆಯೂ ಖಡಕ್ ಸೂಚನೆ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!