Wednesday, August 17, 2022

Latest Posts

ರಾಜ್ಯದಲ್ಲಿ ಹೊಸದಾಗಿ ಮದ್ಯದ ಅಂಗಡಿಗಳ ಆರಂಭಿಸುವುದಿಲ್ಲ: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ

ಬಾಗಲಕೋಟೆ: ರಾಜ್ಯದಲ್ಲಿ ಹೊಸದಾಗಿ ಮದ್ಯದ ಅಂಗಡಿಗಳನ್ನು ಆರಂಭಿಸುವ ಯೋಚನೆ ಇಲ್ಲ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. ಮುಧೋಳ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರಾಯಿ ಮಾರಾಟ ನಿಷೇಧ ಮಾಡಿದ್ದ ಯಡಿಯೂರಪ್ಪನವರು ಹೀಗಾಗಿ ಮಧ್ಯದ ಅಂಗಡಿ ಹೊಸದಾಗಿ ಆರಂಭ ಮಾಡುವುದಿಲ್ಲ ಎಂದು ಹೇಳಿದರು.
ಆರ್ ಎಸ್ ಎಸ್ ಬ್ಯಾಕಗ್ರೌಂಡ ಇರುವಂತಹ ಕಾರ್ಯಕರ್ತರು ನಮ್ಮ ಬಿಜೆಪಿಯಲ್ಲಿ ಇರುವುದರಿಂದ ನಮ್ಮ ಕಾರ್ಯಕರ್ತರು ಮಧ್ಯದ ಅಂಗಡಿ ನಡೆಸುವುದಿಲ್ಲ. ಆ ಯೋಚನೆ ಕೂಡ ಮಾಡುವುದಿಲ್ಲ. ಏನಿದ್ದರೂ ಸರಾಯಿ ಬಂದ್ ಮಾಡುವ ಪಕ್ಷ ನಮ್ಮದಾಗಿದೆ ಹೊಸದಾಗಿ ಎಲ್ಲಿಯೂ ಸರಾಯಿ ಅಂಗಡಿ ತೆರೆಯಲ್ಲ ಎಂದು ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟ ನೀಡಿದರು.
ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಎಲ್ಲ ವ್ಯವಸ್ಥೆ ಮಾಡಲಾಗಿದೆ.ಡಿಸಿ ಖಾತೆಯಲ್ಲಿ 70 ಕೋಟಿ, ತಹಶಿಲ್ದಾರರ ಖಾತೆಯಲ್ಲಿ ೧೨ ಕೋಟಿ ಇದೆ. ಹಣದ ಕೊರತೆ ಇಲ್ಲ ಎಂದರು.
ನದಿದಡದ ಇರುವ ಜನರನ್ನು ಹಾಗೂ ಜಾನು ವಾರಗಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.ಮಳೆಯಿಂದ‌ ಹಾಗೂ ನದಿಗಳಲ್ಲಿ ಹೆಚ್ಚು ನೀರು ಹರಿಯುತ್ತಿರುವ ಕಾರಣ ಜಲಾವೃತವಾಗಿರುವ ಮುಧೋಳ ತಾಲ್ಲೂಕಿನ ಮಾಚಕನೂರ ಬಸವಣ್ಣ ದೇವಸ್ಥಾನ ವೀಕ್ಷಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!