ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಉಲ್ಬಣವಾಗುತ್ತಿದ್ದು, ಇನ್ನೆರಡು ತಿಂಗಣು ಶಾಲೆ ಪ್ರಾರಂಭಿಸುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ಲಾಕ್ ಡೌನ್ ಸಡಿಲಗೊಂಡ ಹಿನ್ನಲೆ ಶಾಲೆ ಪ್ರಾರಂಭಿಸುವುದರ ಕುರಿತು ಚರ್ಚೆ ನಡೆಯುತ್ತಿದ್ದು, ರಾಜ್ಯದಲ್ಲಿನ ಕೊರೋನಾ ಪರಿಸ್ಥಿತಿಯನ್ನು ಅದ್ಯಯನ ನಡೆಸಿ ಬಳಿಕ ಶಾಲೆ ಪ್ರಾರಂಭಿಸುವುದರ ಕುರಿತು ಚಿಂತಿಸಬೇಕು. ಅವಸರದ ತೀರ್ಮಾನ ಬೇಡ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ ಶಾಲೆ ಪ್ರಾರಂಭಿಸದಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಶಾಲೆ ಆರಂಭಕ್ಕೆ ಪೋಷಕರ ವಿರೋಧ: ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲು ಸಲಹೆಗಳಿಗೆ ಆಹ್ವಾನಿಸಿರುವ ಸರ್ಕಾರದ ನಿರ್ಧಾರಕ್ಕೆ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಶಾಸಗಿ ಶಾಲೆಗಳ ಮಾಫಿಯಾಗೆ ಸರ್ಕಾರ ಮಣಿದಿದೆ ಎಂಬ ಆಕ್ರೋಶದೊಂದಿಗೆ ಪೋಚಕರು ಸಹಿ ಸಂಗ್ರಹ ಅಭಿಯಾನ ಹಾಗೂ ಆನ್ ಲೈನ್ ಅಭಿಯಾನ ಕೈಗೊಂಡಿದ್ದು, ಭಾರಿ ಬೆಂಬಲ ವ್ಯಕ್ತವಾಗಿದೆ.
ವಿದೇಶಗಳಲ್ಲಿ ಶಾಲೆ ಪ್ರಾರಂಭಿಸಿದ ಬಳಿಕ ಮಕ್ಕಳಿಗೆ ಸೋಂಕು ತಗುಲಿರುವುದು ವರದಿಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣ ಮೀರಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕನಿಷ್ಠ ಇನ್ನೆರಡು ತಿಂಗಳು ಶಾಲೆಗಳನ್ನು ಪ್ರಾರಂಭಿಸುವುದು ಸೂಕ್ತ ಅಲ್ಲ. @CMofKarnataka ,@nimmasuresh ಅವಸರದ ತೀರ್ಮಾನ ಮಾಡಬಾರದು.#COVIDー19
1/3— Siddaramaiah (@siddaramaiah) June 4, 2020