ಬೆಂಗಳೂರು: ಕೊರೋನಾ ಸೋಂಕಿತರು ಹೆಚ್ಚುತ್ತಿದ್ದಂತೆಯೇ ಗುಣಮುಖರ ಸಂಖ್ಯೆಯೂ ಹೆಚ್ಚುತ್ತಿದೆ. ರಾಜ್ಯದಲ್ಲಿ ಒಂದೇ ದಿನ ೯೦೭೩ ಜನ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
೨೪ ಗಂಟೆಯಲ್ಲಿ ೬೯೭೪ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ೮೩ ಮಂದಿ ಮೃತಪಟ್ಟಿದ್ದಾರೆ. ಒಟ್ಟೂ ೫,೩೩,೮೫೦ ಪ್ರಕರಣಗಳಲ್ಲಿ ಇದುವರೆಗೂ ೪,೩೨,೪೫೦ ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದೇ ದಿನ ೯೦೭೩ ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.