Wednesday, June 29, 2022

Latest Posts

ರಾಜ್ಯದಲ್ಲಿ 3 ಹೊಸ ಕೊರೋನಾ ಪ್ರಕರಣ: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಇಳಿಮುಖ

ಬೆಂಗಳೂರು: ರಾಜ್ಯದಲ್ಲಿ ಏರಿಕೆಯಾಗುತ್ತಿರುವ ಕೊರೋನಾ ಸೋಂಕಿನಿಂದ ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಇಂದು ರಾಜ್ಯದಲ್ಲಿ 3 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದೆ.

ದಕ್ಷಿಣ ಕನ್ನಡದಲ್ಲಿ 1, ಕಲಬುರಗಿಯಲ್ಲಿ 2 ಪ್ರಕರಣಗಳು ಪತ್ತೆಯಾಗಿದೆ, ಸೋಂಕಿಗೆ ರಾಜ್ಯದಲ್ಲಿ ಸೋಂಕಿಗೆ ಮತ್ತೊಂದು ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

ದ.ಕನ್ನಡದ ಪಾಣೆ ಮಂಗಳೂರಿನಲ್ಲಿ ಪಿ.432 ರೋಗಿಯ ಸಂಪರ್ಕದಲ್ಲಿದ್ದ 47 ವರ್ಷದ ಮಹಿಳೆ ಮತ್ತು ಕಲಬುರಗಿಯ 65 ವರ್ಷದ ವೃದ್ಧೆ ಸೇರಿದಂತೆ  ಪಿ.425 ರೋಗಿಯ 2ನೇ ಸಂಪರ್ಕ ಹೊಂದಿದ್ದ 7 ವರ್ಷದ ಬಾಲಕನಿಗೂ ಕೊರೋನಾ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಬೇರೆಯಾವ ಜಿಲ್ಲೆಗಳಲ್ಲೂ ಇಂದು ಯಾವುದೇ ಕೊರೋನಾ ಪ್ರಕರಣ ದಾಖಲಾಗಿಲ್ಲ.

ರಾಜ್ಯದಲ್ಲಿ 302 ಕೊರೋನಾ ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 182 ಮಂದಿ ಗುಣಮುಖರಾಗಿದ್ದಾರೆ. ಉಳಿದಂತೆ 19ಮಂದಿ ಸೋಂಕಿನಿಂದ ಬಲಿಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss