ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ವ್ಯಾಪಕವಾಗುತ್ತಿರುವ ಬೆನ್ನಲ್ಲೆ ಕನ್ನಡ ಸುದ್ದಿಗಾರರೊಬ್ಬರಿಗೆ ಸೋಂಕು ದೃಢಪಟ್ಟಿದ್ದು, ಅವರ ಸಂಪರ್ಕಕ್ಕೆ ಬಂದಿದ್ದ 4 ಸಚಿವರನ್ನು 14 ದಿನ ಕ್ವಾರಂಟೈನ್ ಮಾಡಲಾಗಿದೆ.
ರಾಜ್ಯದ ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರವಾಸೋಧ್ಯಮ ಸಚಿವ ಸಿ.ಟಿ. ರವಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಇವರೆಲ್ಲಾ ಸೋಂಕಿತ ಕ್ಯಾಮರಾಮೆನ್ ಸಂಪರ್ಕಕ್ಕೆ ಬಂದುದ್ದರಿಂದ ಅವರನ್ನು ಕ್ವಾರಂಟೈನ್ ಮಾಡಲಾಗಿದೆ.
ಈಗಾಗಲೆ ನಾಲ್ವರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ಅವರಲ್ಲಿ ಸಿ.ಎನ್. ಅಶ್ವತ್ಥ ನಾರಾಯಣ, ಬಸವರಾಜ ಬೊಮ್ಮಾಯಿ, ಮತ್ತು ಸಿ.ಟಿ. ರವಿ ಅವರ ಪರೀಕ್ಷಾ ವರದಿ ನೆಗಟಿವ್ ಬಂದಿದ್ದು, ಡಾ. ಸುಧಾಕರ್ ಅವರ ವರದಿ ಇನ್ನು ಬರಬೇಕಷ್ಟೆ. ಈ ಹಿನ್ನಲೆ ಸೋಂಕಿನ ಪರೀಕ್ಷೆಗೆ ಒಳಗಾಗಿರುವ ಕಾರಣ ಎಲ್ಲರು ಸ್ವಯಂ ಪ್ರೇರಿತ ಕ್ವಾರಂಟೈನ್ ನಲ್ಲಿ ಇರಲು ತೀರ್ಮಾಸಿರಿವುದಾಗಿ ಟ್ವೀಟ್ ಮಾಡಿದ್ದಾರೆ.