ಬೆಂಗಳೂರು: ಮಂಗಳವಾರ ಮದ್ಯಾಹ್ನದ ವೇಳೆ ರಾಜ್ಯದಲ್ಲಿ ಮತ್ತೆ 42 ಪ್ರಕರಣ ಪತ್ತೆಯಾಗಿದ್ದು, ಇದರಿಂದ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 904ಕ್ಕೆ ಏರಿಕೆಯಾಗಿದೆ.
ಅಹಮದಾಬಾದ್ ಪ್ರಯಾಣ ಹಿನ್ನೆಲೆ ಹೊಂದಿರುವ 19 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ರಾಜ್ಯದ ಯಾದಗಿರಿ, ಬಾಗಲಕೋಟೆ, ಯಾದಗಿರಿ ಜಿಲ್ಲೆಗಳಿಗೆ ಅಹಮದಾಬಾದ್ ನಿಂದ ಆಗಮಿಸಿದ ಸೋಂಕಿತರಿಂದ ಕೊರೋನಾ ಹಬ್ಬಿದೆ.
ಗ್ರೀನ್ ಝೋನ್ ಆಗಿರುವ ಹಾಸನ, ಯಾದಗಿರಿಗೂ ಕೊರೋನಾ ಕಾಲಿಟ್ಟಿದೆ.
ರಾಜ್ಯದಲ್ಲಿನ ಕೊರೋನಾ ಹೊಸ ಸೋಂಕಿತರಲ್ಲಿ ಭಾಗಶಃ ಪಾಸಿಟಿವ್ ಕೇಸ್ ಗಳು ಅಹಮದಾಬಾದ್ ಗುಜರಾತ್ ಗೆ ಹಾಗೂ ಮುಂಬೈ ಮಹಾರಾಷ್ಟ್ರಗೆ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿದ್ದಾರೆ ಎಂದು ವರದಿಯಾಗಿದೆ.
ಕೋವಿಡ್19: ಬೆಳಗಿನ ವರದಿ
ಒಟ್ಟು ಪ್ರಕರಣಗಳು: 904
ಮೃತಪಟ್ಟವರು: 31
ಗುಣಮುಖರಾದವರು: 426
ಹೊಸ ಪ್ರಕರಣಗಳು: 42#KarnatakaFightsCorona #IndiaFightsCoronavirus pic.twitter.com/KZcF9GPQVl— B Sriramulu (@sriramulubjp) May 12, 2020