Thursday, August 11, 2022

Latest Posts

ರಾಜ್ಯದಿಂದ ಮೂರು ವಿಶೇಷ ರೈಲುಗಳ ಸಂಚಾರ ಪ್ರಾರಂಭ: ದೇಶ ಮೂರು ನಗರಗಳಿಗೆ ರೈಲು ಸಂಪರ್ಕ

ಬೆಂಗಳೂರು: ಸೆ.21ರಿಂದ ಕರ್ನಾಟಕದಿಂದ ಮೂರು ವಿಶೇಷ ರೈಲುಗಳು ಸಂಚಾರ ಮಾಡಲಿದೆ. ದೇಶದ ವಿವಿಧ ನಗರಗಳಿಗೆ ಈ ರೈಲುಗಳು ಸಂಪರ್ಕ ಕಲ್ಪಿಸಲಿದೆ.

310 ವಿಶೇಷ ರೈಲುಗಳು ಈಗಾಗಲೇ ಸಂಚಾರ ಪ್ರಾರಂಭ ಮಾಡಿದ್ದು, ಭಾರತೀಯ ರೈಲ್ವೇ ಇಲಾಖೆಯು ನೂತನ ವೇಳಾಪಟ್ಟಿಯನ್ನು ಪ್ರಕಟಗೊಳಿಸಿದೆ. ಈ ರೈಲುಗಳ ಸಂಚಾರ ಹಾಗೂ ನಿಲುಗಡೆಗಳು ಸೀಮಿತವಾಗಿರಲಿದೆ ಎಂದು ಹೇಳಿಕೆ ತಿಳಿಸಿದೆ.

ಇದು ಕ್ಲೋನ್ ರೈಲುಗಳಾಗಿದ್ದು, ನಿಗದಿತ ವೇಳೆಯಲ್ಲಿ ಮಾತ್ರ ಸಂಚಾರ ಮಾಡಲಿದ್ದು, ಶ್ರಮಿಕ್ ರೈಲು ಹಾಗೂ ವಿಶೇಷ ರೈಲುಗಳನೊಳಗೊಂಡು ಈ ನೂತನ ಕ್ಲೋನ್ ರೈಲು ಸಂಚಾರ ಮಾಡಲಿದೆ.

ಸೆ.21ರಿಂದ ಸಂಚಾರ ಪ್ರಾರಂಭಿಸಲಿರುವ ಮೂರು ರೈಲುಗಳು:
ಕೆಎಸ್ ಆರ್ ಬೆಂಗಳೂರಿನಿಂದ ಢಾಣಾಪುರ
ಯಶವಂತಪುರ ದಿಂದ ಹಜರತ್ ನಿಜಾಮುದ್ದೀನ್
ವಾಸ್ಕೋಡಿ ಗಾಮದಿಂದ ಹಜರತ್ ನಿಜಾಮುದ್ದೀನ್ ಗೆ ತಲುಪಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss