Wednesday, August 17, 2022

Latest Posts

ರಾಜ್ಯದ ಅಭಿವೃದ್ಧಿಗಾಗಿ ಮೋದಿ ಸರ್ಕಾರಕ್ಕೆ ಒಂದು ಅವಕಾಶ ನೀಡಿ: ಬಂಗಾಳ ಜನತೆಯಲ್ಲಿ ಅಮಿತ್​ ಶಾ ಮನವಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯದ ಅಭಿವೃದ್ಧಿಗಾಗಿ ಮೋದಿ ಸರ್ಕಾರಕ್ಕೆ ಒಂದು ಅವಕಾಶ ನೀಡಿ ಎಂದು ಬಂಗಾಳ ಜನರಲ್ಲಿ ಅಮಿತ್​ ಶಾ ಮನವಿ ಮಾಡಿದ್ದಾರೆ.
ಮುಂದಿನ ವರ್ಷ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುಂಚಿತವಾಗಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದ ಅಮಿತ್​ ಶಾ ಪಕ್ಷ ಸಂಘಟನೆ ಕೆಲಸ ಮಾಡಿದರು.
ತೃಣಮೂಲ ಕಾಂಗ್ರೆಸ್​ ಪಕ್ಷದ ಮಮತಾ ಅವರಿಗೆ 2010ರಲ್ಲಿ ಅಧಿಕಾರವನ್ನು ಕೊಡಲಾಯಿತು. ಆದರೆ ಈ 10 ವರ್ಷಗಳಲ್ಲಿ ಅವರ ಸರ್ಕಾರ ಟೊಳ್ಳು ಸರ್ಕಾರ ಎನ್ನುವುದು ಸಾಬೀತಾಗಿದೆ. ಇಲ್ಲಿನ ಜನರಿಗೆ ಅವರ ಬಗ್ಗೆ ಆಕ್ರೋಶ ಹುಟ್ಟಿದೆ. ಮುಂದಿನ ವರ್ಷದ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಟಿಎಂಸಿ ವಿರುದ್ಧ 200 ಸೀಟುಗಳ ಜಯ ಸಾಧಿಸಲಿದೆ ಎಂದು ಅಮಿತ್​ ಶಾ ಹೇಳಿದ್ದಾರೆ.
ನೀವು ಕಾಂಗ್ರೆಸ್​ಗೆ ಮತ ನೀಡಿದಿರಿ, ಕಮ್ಯುನಿಸ್ಟರಿಗೆ ಮತ ನೀಡಿದಿರಿ, ಟಿಎಂಸಿಗೂ ಮತ ನೀಡಿದಿರಿ. ಈಗ ಬಿಜೆಪಿಗೆ ಮತ ನೀಡಿ. ಕೇಂದ್ರ ಸರ್ಕಾರದಿಂದ ಬರುವ ಯಾವ ಹಣವನ್ನು ಟಿಎಂಸಿ ಸರ್ಕಾರ ಜನರಿಗೆ ಬಳಸುತ್ತಿಲ್ಲ. ಕೊರೋನಾದಂತಹ ಸಂಕಷ್ಟದ ಸಮಯದಲ್ಲೂ ಪಕ್ಷ ಭ್ರಷ್ಟಾಚಾರವನ್ನು ಮುಂದುವರಿಸಿದೆ. ಈ ದುಸ್ಥಿತಿಯನ್ನು ನಮ್ಮ ಪಕ್ಷ ಆಡಳಿತಕ್ಕೆ ಬಂದ ಮೇಲೆ ಸರಿಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ರಾಜಕೀಯ ಕಾರ್ಯಕರ್ತರ ಹತ್ಯೆಯ ವಿಷಯ ಬಂದಾಗ ಪಶ್ಚಿಮ ಬಂಗಾಳ ದೇಶದಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ಒಂದು ವರ್ಷದಲ್ಲಿ 100 ಬಿಜೆಪಿ ಕಾರ್ಯಕರ್ತರನ್ನ ಹತ್ಯೆ ಮಾಡಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನ ಗಳಿಸಿ ಸರ್ಕಾರ ರಚನೆ ಮಾಡಲಿದೆ. ಲೋಕಸಭೆ ಚುನಾವಣೆಯಲ್ಲಿ ಜನರು ನಮಗೆ ಆಶೀರ್ವಾದ ಮಾಡಿರುವ ರೀತಿಯಲ್ಲಿ ಇಲ್ಲೂ ಮಾಡುತ್ತಾರೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!