Wednesday, June 29, 2022

Latest Posts

ರಾಜ್ಯದ ಎಪಿಎಂಸಿಗಳ ಖಾಸಗೀಕರಣ ಕೃಷಿಕರಿಗೆ ಮಾರಕ: ಶಾಸಕ‌ ಪರಣ್ಣಮುನವಳ್ಳಿ

ಕೊಪ್ಪಳ: ರಾಜ್ಯದ ಎಪಿಎಂಸಿಗಳ ಖಾಸಗೀಕರಣ ಕೃಷಿಕರು ಸೇರಿ ಎಪಿಎಂಸಿ ಅವಲಂಬಿತರಿಗೆ ಮಾರಕವಾಗಲಿದ್ದು ಇದರ ಸಾಧಕಬಾಧಕ ಸಭೆ ನಡೆಸುವಂತೆ ಮುಖ್ಯಮಂತ್ರಿ ಮತ್ತು ಎಪಿಎಂಸಿ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ಅವರು ಸೋಮವಾರ ಎಪಿಎಂಸಿ ಪ್ರಾಂಗಣದಲ್ಲಿ 12 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸದ ಸಂದರ್ಭದಲ್ಲಿ ಹಮಾಲಿಕಾರ್ಮಿಕರು ಖಾಸಗೀಕರಣದ ಕುರಿತು ಎತ್ತಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.

ರಾಜ್ಯದ ಎಪಿಎಂಸಿಗಳಿಂದ ವಾರ್ಷಿಕ ಸುಮಾರು ಸಾವಿರ ಕೋಟಿ ಆದಾಯವಿದೆ. ಕೃಷಿಕರು ಹಮಾಲಿ ಕಾರ್ಮಿಕರು, ‌ವರ್ತಕರ ಶೋಷಣೆ ತಡೆಯಲು ಎಪಿಎಂಸಿ ಯಲ್ಲಿ ಅವಕಾಶವಿದ್ದು ಇದು ಖಾಸಗೀಕರಣಗೊಂಡರೆ ಎಪಿಎಂಸಿ ಗಳ ಅವಲಂಬಿತರ ಶೋಷಣೆ ಖಂಡಿತ ಆದ್ದರಿಂದ ಎಲ್ಲ ವಿಚಾರಗಳನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುತ್ತದೆ ಎಂದರು.

ಕನಕಗಿರಿ ಶಾಸಕ ದಡೇಸೂಗೂರು ಬಸವರಾಜ ಎಪಿಎಂಸಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ಸೇರಿ‌ನಿರ್ದೇಶಕರು ಕಾರ್ಯದರ್ಶಿಗಳಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss