Tuesday, August 16, 2022

Latest Posts

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇನ್ಮುಂದೆ ಬ್ರಾಹ್ಮಣರಿಗೆ ಸಿಗಲಿದೆ ಜಾತಿ ಪ್ರಮಾಣ ಪತ್ರ; ಪ್ರಮಾಣ ಪತ್ರ ಕೊಡಲು ಕಂದಾಯ ಇಲಾಖೆಯಿಂದ ಆದೇಶ: ಸಚಿವ ಆರ್.ಅಶೋಕ್

ಮೈಸೂರು: ರಾಜ್ಯದಲ್ಲಿರುವ ಎಲ್ಲಾ ಬ್ರಾಹ್ಮಣರಿಗೂ ಇನ್ಮುಂದೆ ಜಾತಿ ಪ್ರಮಾಣ ಪತ್ರ ಸಿಗಲಿದೆ. ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರವನ್ನು ನೀಡಲು ಕಂದಾಯ ಇಲಾಖೆಯಿಂದ ಇದೀಗ ಆದೇಶ ಹೊರಡಿಸಲಾಗಿದೆ ಎಂದು ಇಲಾಖೆಯ ಸಚಿವ ಆರ್.ಅಶೋಕ್ ತಿಳಿಸಿದರು.
ಬುಧವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ಬಳಿಕ ರಾಜ್ಯದಲ್ಲಿರುವ ಶೇ ೩ರಷ್ಟು ಜನಸಂಖ್ಯೆಯಿರುವ ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರವನ್ನು ಯಾವ ಸರ್ಕಾರಗಳು ಕೊಡುತ್ತಿರಲಿಲ್ಲ. ಇದರಿಂದಾಗಿ ಅವರಿಗೆ ಶಾಲೆ, ಕಾಲೇಜುಗಳಲ್ಲಿ ರಿಯಾಯಿತಿ ಪಡೆಯಲು ಬಹಳ ಕಷ್ಟವಾಗುತ್ತಿತ್ತು. ಕೇಂದ್ರ ಸರ್ಕಾರ ಇತ್ತೀಚೆಗೆ ಸಾಮಾನ್ಯ ವರ್ಗದಲ್ಲಿ ಬ್ರಾಹ್ಮಣರಿಗೆ ಶೇ ೧೦ರಷ್ಟು ಮೀಸಲು ನೀಡಿದೆ. ಇದನ್ನು ಪಡೆಯಬೇಕಾದರೆ ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರ ಬೇಕಾಗಿತ್ತು. ಆದರೆ ರಾಜ್ಯದ ಯಾವ ಜಿಲ್ಲೆಯಲ್ಲೂ ಪ್ರಮಾಣ ಪತ್ರವನ್ನು ಕೊಡುತ್ತಿರಲಿಲ್ಲ. ಈ ಬಗ್ಗೆ ಶಾಸಕ ಎಸ್.ಎ.ರಾಮದಾಸ್, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರು ಹಾಗೂ ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಕೂಡ ತಮಗೆ ಮನವಿ ಮಾಡಿದ್ದರು. ಹಾಗಾಗಿ ಬದಲಾವಣೆ ಮಾಡಿ, ಸ್ವಾತಂತ್ರ್ಯ ಬಂದ ಬಳಿಕ ಇದೇ ಮೊದಲ ಬಾರಿಗೆ ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರವನ್ನು ನೀಡುವಂತೆ ಕಂದಾಯ ಇಲಾಖೆಯಿಂದ ಆದೇಶ ಹೊರಡಿಸಿದ್ದೇನೆ, ಇದರಿಂದಾಗಿ ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇನ್ಮುಂದೆ ಬ್ರಾಹ್ಮಣರಿಗೆ ಅವರ ಜಾತಿ ಪ್ರಮಾಣ ಪತ್ರಗಳು ಸಿಗಲಿವೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss