Wednesday, August 17, 2022

Latest Posts

ರಾಜ್ಯದ ಜನತೆಯ ಕಷ್ಟಗಳಿಗೆ ಸ್ಪಂದಿಸಿ, ಕಣ್ಣೀರು ಒರೆಸಿದ ಮುಖ್ಯಮಂತ್ರಿ ಯಡಿಯೂರಪ್ಪ: ನಳಿನಕುಮಾರ್ ಕಟೀಲ್

ತುಮಕೂರು: ರಾಜ್ಯದ ಜನರು ಕಣ್ಣೀರು ಹರಿಸುವಂತೆ ಮಾಡಿದ, ಮಗನ ಗೆಲುವಿಗಾಗಿ ಕಣ್ಣೀರು ಹರಿಸಿದ ಮುಖ್ಯಮಂತ್ರಿಗಳನ್ನು ಈ ರಾಜ್ಯದ ಜನತೆ ನೋಡಿದೆ. ಆದರೆ ರಾಜ್ಯದ ಜನತೆಯ ಕಷ್ಟಗಳಿಗೆ ಸ್ಪಂದಿಸಿ ಅವರು ಕಣ್ಣೀರು ಒರೆಸಿದ ಮುಖ್ಯ ಮಂತ್ರಿಗಳು ಎಂದರೆ ಅವರು ಮುಖ್ಯ ಮಂತ್ರಿ ಯಡಿಯೂರಪ್ಪನವರು ಎಂದು ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನಕುಮಾರ್ ಕಟೀಲ್ ಅವರು ಹೇಳಿದರು.
ಶಿರಾದಲ್ಲಿ ಬಿಜೆಪಿ ಪರವಾಗಿ ಚುನಾವಣೆಯ ಪ್ರಚಾರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು ಮುಖ್ಯ ಮಂತ್ರಿಯಡಿಯೂರಪ್ಪನವರ ಸರ್ಕಾರ ಈ ರಾಜ್ಯದ ಜನರ ಸಂಕಷ್ಟಗಳ ಪರಿಹಾರಕ್ಕೆ ಶ್ರಮಿಸುತ್ತಿದೆ ಎಂದರು.
ಜೆಡಿಎಸ್ ಒಂದು ಕುಟುಂಬಕ್ಕೆ ಸೀಮೀತವಾದ ಪಕ್ಷ. ಅಲ್ಲಿ ಆ ಕುಟುಂಬದವರು ಮಾತು ಮಾತ್ರ ನಡೆಯುತ್ತದೆ.ಆದರಿಂದ ಬೇಸತ್ತು 17ಮಂದಿ ಆ ಪಕ್ಷದ ಶಾಸಕರಾಗಿದ್ದವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದರು ನಂತರ ಬಿಜೆಪಿ ಸೇರಿ ಗೆದ್ದು ಬಂದರು.ಅವರು ರಾಜಿನಾಮೆ ನೀಡುವಲ್ಲಿ ಬಿಜೆಪಿ ಪಾತ್ರವೇನೂ ಇರಲಿಲ್ಲ ಎಂದರು. ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದ ದುರಾಡಳಿತದಿಂದ ಬೇಸತ್ತಿದ್ದ ಮತದಾರರು ಆ ಪಕ್ಷ ತೊರೆದು ಬಿಜೆಪಿಯಿಂದ ಸ್ಫರ್ಧಿಸಿದ್ದರು 15 ಜನರ ಪೈಕಿ 13 ಮಂದಿಯನ್ನು ಗೆಲ್ಲಿಸಿ ಯಡಿಯೂರಪ್ಪನವರ ಶಕ್ತಿಯನ್ನು ಹೆಚ್ಚು ಮಾಡಿದರು ಆದೇಶ ರೀತಿ ಶಿರಾ ಮತದಾರರು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಯಡಿಯೂರಪ್ಪನವರಿಗೆ ಮತ್ತಷ್ಟು ಶಕ್ತಿಯನ್ನು ತುಂಬಬೇಕು ಎಂದರು. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ ನಂತರ ಬರ.ನೆರೆ ಎಲ್ಲವನ್ನೂ ಸಮರ್ಥವಾಗಿ ಎದುರಿಸಿದ್ದಾರೆ ಅದೇ ರೀತಿ ಕೊವಿಡ್ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ ಎಂದರು. ಮೂರು-ನಾಲ್ಕು ದಿನಗಳಲ್ಲಿ ಕ್ಷೇತ್ರದ ಜನರು ಒಪ್ಪುವ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಆ ಅಭ್ಯರ್ಥಿಯ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದರು.
ಆಕಾಂಕ್ಷಿಗಳಲ್ಲಿ ಒಬ್ಬರಾದ ಬಿ.ಕೆ.ಮಂಜುನಾಥ್ ಮಾತನಾಡಿ ಸ್ಥಳೀಯರಿಗೆ ಯಾರನ್ನೇ ಅಭ್ಯರ್ಥಿಯಾಗಿ ಮಾಡಿದರೂ ಅವರನ್ನು ಗೆಲ್ಲಿಸುವ ಹೊಣೆ ನಮ್ಮದು ಎಂದರು. ಸಂಸದ ಪ್ರತಾಪ ಸಿಂಹ ಮಾತನಾಡಿ ಶಿರಾದಲ್ಲಿ ಅನುಕಂಪದ ಲಾಭ ಪಡೆಯಲು ಪ್ರಯತ್ನ ಮಾಡಿರುವ ಕುಮಾರಸ್ವಾಮಿ ನನಗೆ ವಿಷ ಕೊಡುತ್ತೀರೊ ವಿಷ ಕೊಡುತ್ತೀರೊ ಎಂಬ ಭಾವನಾತ್ಮಕ ಮಾತುಗಳನ್ನು ಆಡಿದ್ದಾರೆ ಪಾಪ ಅವರಿಗೆ ಹಾಲೂ ಕೊಡಬೇಡಿ ವಿಷಯವನ್ನೂ ಕೊಡಬೇಡಿ ಅವರಿಗೆ ಕೊರೊನ ಕಷಾಯ ಕೊಟ್ಟು ಕಳುಹಿಸಿ ಅವರ ಆರೋಗ್ಯವಾಗಿರಲಿ ಎಂದು ಛೇಡಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುರೇಶ್ ಗೌಡ ಮಾತನಾಡಿ ಬಿಜೆಪಿಗೆ ಮತನೀಡಿದರೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸಹಾಯ ವಾಗುತ್ತದೆ ಎಂದರು. 900ಕೋಟೆ ರೂಗಳ ಭದ್ರಾಮೇಲ್ದಂಡೆ ಯೋಜನೆ ಮೂಲಕ ತಾಲೂಕಿನ 42 ಕೆರೆಗಳಿಗೆ ನೀರು ಹರಿಸಲಾಗುವುದು ಎಂದರು. ಮಾಜಿ ಶಾಸಕ ಕಿರಣ್ ಕುಮಾರ್. ಸಂಸದ ನಾರಾಯಣ ಸ್ವಾಮಿ ಮಾತನಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!