Wednesday, August 10, 2022

Latest Posts

ರಾಜ್ಯದ ನೂತನ ಸಚಿವರ ಅಧಿಕೃತ ಫೈನಲ್ ಪಟ್ಟಿ ರಿಲೀಸ್!! ಯಾರಾಗ್ತಾರೆ ನೂತನ ಸಚಿವರು?

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ನೂತನ ಸಚಿವರ ಅಧಿಕೃತ ಪಟ್ಟಿ ಬಿಡುಗಡೆಯಾಗಿದ್ದು, 7 ಜನ ಶಾಸಕರು ಇಂದು ರಾಜ್ಯಭವನದಲ್ಲಿ  ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ. ಅಂತಿಮ ಪಟ್ಟಿಯನ್ನ ರಾಜ್ಯಭವನಕ್ಕೆ ಕಳಿಸಲಾಗಿದೆ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಈ ಕುರಿತಂತೆ ಸಿಎಂ ಸುದ್ದಿಗಾರರೊಂದಿಗೆ ಮಾತನಾಡಿ ಅಂತಿಮ ಪಟ್ಟಿಯನ್ನ ಘೋಷಿಸಿದ್ದಾರೆ.
ಉಮೇಶ್‌ ಕತ್ತಿ, ಮುರುಗೇಶ್ ನಿರಾಣಿ, ಅರವಿಂದ್‌ ಲಿಂಬಾವಳಿ, ಆರ್.‌ ಶಂಕರ್, ಎಂಟಿಬಿ ನಾಗರಾಜ್‌, ಎಸ್.‌ ಅಂಗಾರ, ಸಿ.ಪಿ. ಯೋಗೇಶ್ವರ್ ಈ 7 ಜನರ ಹೆಸರುಗಳನ್ನು ರಾಜ್ಯಭವನಕ್ಕೆ ಕಳಿಸಲಾಗಿದೆ. ಇನ್ನೊಂದು ಸ್ಥಾನ ಖಾಲಿ ಇಟ್ಟುಕೊಂಡಿದ್ದೇವೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss