Friday, August 12, 2022

Latest Posts

ರಾಜ್ಯದ ಪ್ರಥಮ- ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ದಾಖಲಾತಿ ದಿನಾಂಕದಲ್ಲಿ ಮತ್ತೆ ವಿಸ್ತರಣೆ

ಮಂಗಳೂರು: 2020-21ನೇ ಸಾಲಿಗೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ದಾಖಲಾತಿಯ ಪ್ರಕ್ರಿಯೆಯನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆ ಈಗಾಗಲೇ ಸುತ್ತೋಲೆ ಹೊರಡಿಸಿತ್ತು. ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿಗೆ ದಾಖಲಾತಿಗೆ ಕೊನೆಯ ದಿನಾಂಕವನ್ನುಅಕ್ಟೋಬರ್ 29 ರಂದು ನಿಗದಿ ಪಡಿಸಲಾಗಿತ್ತು. ಆದರೆ ಇದೀಗ ಕೊನೆಯ ದಿನಾಂಕವನ್ನು ಮತ್ತೆ ವಿಸ್ತರಣೆ ಮಾಡಿದ್ದು, ಪ್ರಥಮ ಪಿಯುಸಿಗೆ ದಾಖಲಾತಿಗೆ ಕೊನೆಯ ದಿನಾಂಕ 27-11-2020 ಆಗಿದ್ದರೇ, ದ್ವಿತೀಯ ಪಿಯುಸಿಗೆ ದಾಖಲಾತಿಗೆ ಕೊನೆಯ ದಿನಾಂಕ 13-11-2020 ಆಗಿದೆ.
ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಪ್ರಥಮ ಮತ್ತು ದ್ವಿತೀಯ ಪಿಯುಸಿಗೆ ದಾಖಲಾತಿ ದಿನಾಂಕವನ್ನು ವಿಸ್ತರಿಸಿ, ಅನುಕೂಲ ಮಾಡಿಕೊಡಲು ಸೂಚಿಸಿದ್ದಾರೆ.
ಈ ಸಂಬಂಧ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಾಗೂ ಮರು ಮೌಲ್ಯಮಾಪನದಲ್ಲಿ ಉತ್ತೀರ್ಣರಾಗುವಂತಹ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗ ಮುಂದುವರೆಸಲು ಅನುಕೂಲವಾಗಲು ನವೆಂಬರ್-2020ರವರೆಗೆ ವಿಸ್ತರಿಸಲು ಕೋರಿರುತ್ತಾರೆ.
ಈ ಹಿನ್ನಲೆಯಲ್ಲಿ, ಪ್ರಥಮ ಪಿಯುಸಿ ದಾಖಲಾತಿಗೆ ಎಲ್ಲಾ ವಿದ್ಯಾರ್ಥಿಗಳಿಗೆ ( ಪೂರಕ ಪರೀಕ್ಷೆ ಉತ್ತೀರ್ಣರಾದವರು, ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಹಾಗೂ ಪೂರಕ ಪರೀಕ್ಷೆಯ ಮರು ಮೌಲ್ಯ ಮಾಪನದಲ್ಲಿ ಉತ್ತೀರ್ಣರಾದವರು ಸೇರಿದಂತೆ ) ಕೊನೆಯ ದಿನಾಂಕವನ್ನು ದಿನಾಂಕ 27-11-2020ರವರೆಗೆ ವಿಸ್ತರಿಸಲಾಗಿದೆ.
ದ್ವಿತೀಯ ಪಿಯುಸಿ ದಾಖಲಾತಿಗೆ ಕೊನೆಯ ದಿನಾಂಕವನ್ನು ದಿನಾಂಕ 13-11-2020ರವರೆಗೆ ವಿಸ್ತರಿಸಲಾಗಿದೆ.ದಾಖಲಾತಿ ಶುಲ್ಕವನ್ನು ಖಜಾನೆಗೆ ಮೂರನೇ ಕಾರ್ಯನಿರತ ದಿನದಂದು ಕಡ್ಡಾಯವಾಗಿ ಪಾವತಿಸುವುದು ಎಂಬುದಾಗಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss