Monday, August 15, 2022

Latest Posts

ರಾಜ್ಯದ ಮೊದಲ ರೋ ರೋ ರೈಲು ಸೇವೆಗೆ ಹಸಿರು ನಿಶಾನೆ ತೋರಿದ ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು: ಬೆಂಗಳೂರು ನಗರದಿಂದ ಮೊದಲ ರೋ ರೋ ಸೇವೆ ಭಾನುವಾರ ಆರಂಭಗೊಂಡಿದೆ.
ಇದೇ ಮೊದಲ ಬಾರಿಗೆ ನೈಋತ್ಯ ರೈಲ್ವೆಯು ಆರಂಭಿಸಿರುವ ಈ ರೋ ರೋ ನೂತನ ಸೇವೆಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಕೇಂದ್ರ ರೈಲ್ವೆ ರಾಜ್ಯಸಚಿವ ಸುರೇಶ್ ಅಂಗಡಿ, ಕಂದಾಯ ಸಚಿವ ಆರ್. ಅಶೋಕ್, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶಂಕರ್ ಗೌಡ ಪಾಟೀಲ್ ಶಾಸಕ ನಾರಾಯಣಸ್ವಾಮಿ ಉಪಸ್ಥಿತರಿದ್ದರು. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ತೆಲಂಗಾಣಗಳ ಕೃಷಿ ಬಳಕೆ ಕೇಂದ್ರಗಳ ನಡುವೆ ಈ ರೈಲು ಸಂಪರ್ಕ ಕಲ್ಪಿಸಲಿದೆ.
ಹೇಗಿದೆ ನೂತನ ರೋ ರೋ ಸೇವೆ?
ಬೆಂಗಳೂರು ನಗರದಿಂದ ಆರಂಭವಾಗಲಿರುವ ನೂತನ ರೋ ರೋ ಸೇವೆಯಲ್ಲಿ 43 ಓಪನ್ ವ್ಯಾಗನ್‌ಗಳು ಇರಲಿವೆ. ಒಟ್ಟು 682 ಕಿ. ಮೀ. ಮಾರ್ಗದಲ್ಲಿ ಈ ರೈಲು ಸಂಚಾರ ನಡೆಸಲಿದ್ದು, ಒಂದು ಬಾರಿ ರೈಲು ಸಂಚಾರ ನಡೆಸಲು 7 ದಿನಗಳ ಅವಧಿ ತೆಗೆದುಕೊಳ್ಳಲಿದೆ. 43ಕ್ಕೂ ಅಧಿಕ ಲಾರಿಗಳನ್ನು ಲಾರಿಗಳ ಗಾತ್ರದ ಆಧಾರದ ಮೇಲೆ ರೈಲು ವ್ಯಾಗನ್‌ನಲ್ಲಿ ಸಾಗಿಸಬಹುದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss