Saturday, June 25, 2022

Latest Posts

ರಾಜ್ಯದ ಯಾವುದಾದರೂ ವಿಶ್ವವಿದ್ಯಾಲಯಕ್ಕೆ ಅಮರಶಿಲ್ಪಿ ಜಕಣಾಚಾರಿ ಹೆಸರು ನಾಮಕರಣ ಮಾಡಲು ಒತ್ತಾಯ

ಹೊಸ ದಿಗಂತ ವರದಿ ಮೈಸೂರು:

ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಸರಸ್ವತಿಪುರಂನಲ್ಲಿರುವ ಬ್ರಹ್ಮಶ್ರೀ ಕಶ್ಯಪ ಶಿಲ್ಪಕಲಾ ಆವರಣದಲ್ಲಿ 5 ತಲೆಮಾರಿನಿಂದ ಶಿಲ್ಪಕಲೆ ಯನ್ನು ಮುಂದುವರೆಸಿಕೊಂಡು ಬಂದಂಥ ಇಂದಿನ ಯುವ ಪೀಳಿಗೆ ಯುವ ಶಿಲ್ಪಿಗಳಿಗೆ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಅಂಗವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.

ಶಿಲ್ಪಿಗಳಾದ ಯೋಗರಾಜ್ ,ಅರುಣ್ ,ನಾಗರಾಜು, ಚೆಲುವರಾಜು, ಸಿದ್ದರಾಜು, ಚಂದ್ರು ಇವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸರಸ್ವತಿ ಪುರಂ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ತಿಮ್ಮರಾಜು, `ಜಕಣಾಚಾರಿ ವಿಶ್ವಮಾನ್ಯ ಶಿಲ್ಪಿ’ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರು ಸಮುದಾಯಕ್ಕೆ ಸೀಮಿತರಾದ ಶಿಲ್ಪಿಯಲ್ಲ, ವಿಶ್ವಮಾನ್ಯ ಶಿಲ್ಪಿ. ಭಾರತೀಯ ಶಿಲ್ಪಕಲೆ, ಸಂಸ್ಕೃತಿ ಉತ್ತುಂಗಕ್ಕೇರಲು ಜಕಣಾಚಾರಿ ಅವರ ಕೊಡುಗೆ ಅಗ್ರಮಾನ್ಯ. ಜಕಣಾಚಾರಿ ಅವರ ಕಲಾಚಾತುರ್ಯಕ್ಕೆ ವಿಶ್ವವೇ ಬೆರಗಾಗಿದೆ. ಭಾರತದ ಶಿಲ್ಪಕಲೆಯ ಸೌಂದರ್ಯ ಕಂಡು ಆಕರ್ಷಿತರಾಗಿದ್ದಾರೆ. ದೇಶದ ಪ್ರಸಿದ್ಧ ಶಿಲ್ಪಕಲೆಗಳ ಹಿಂದೆ ಜಕಣಾಚಾರಿ ಕಲಾ ಕೌಶಲ ಎದ್ದು ಕಾಣುತ್ತದೆ ಎಂದು ಸ್ಮರಿಸಿದರು.

ಜೆಡಿಎಸ್ ಯುವ ಮುಖಂಡರಾದ ರಿಶಿ ವಿಶ್ವಕರ್ಮ ಮಾತನಾಡಿ, ಕರ್ನಾಟಕದಲ್ಲಿ ಮೂವತ್ತು ಲಕ್ಷಕ್ಕೂ ಹೆಚ್ಚು ವಿಶ್ವಕರ್ಮ ಸಮುದಾಯ ವಾಸಿಸುತ್ತಿದ್ದು ಹಾಗಾಗಿ ರಾಜ್ಯದ ಯಾವುದಾದರೂ ವಿಶ್ವವಿದ್ಯಾಲಯಕ್ಕೆ ಅಮರಶಿಲ್ಪಿ ಜಕಣಾಚಾರಿ ಹೆಸರು ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು. ವಿಶ್ವಕರ್ಮರು ತಮ್ಮ ಕಾಯಕದಲ್ಲಿ ಅತ್ಯಂತ ನಿಷ್ಠೆ ಪ್ರದರ್ಶಿಸಿದ್ದು, ಮಾಡಿದ ಕೆಲಸಕ್ಕೆ ಎಂದೂ ತಮ್ಮ ಹೆಸರು ಹಾಕಿ ಕೊಂಡಿಲ್ಲ.

ಅಂತೆಯೇ ಜಕಣಾಚಾರಿಗಳು ತಮ್ಮ ವಿಶಿಷ್ಟ ಕಲಾ ಕೌಶಲ್ಯತೆಯಿಂದ ಹಲವು ದೇವಾಲಯಗಳನ್ನು ನಿರ್ಮಿಸಿ ದ್ದರೂ ಅವುಗಳ ನಿರ್ಮಾತೃ ತಾವೆಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಇದೇ ಕಾರಣಕ್ಕೆ ಕೆಲವರು ಜಕಣಾಚಾರಿ ಎಂಬ ವ್ಯಕ್ತಿಯೇ ಇರಲಿಲ್ಲ ಎಂದು ವಾದಿಸಿದ್ದರು. ಈ ರೀತಿಯ ವಾದ ಖಂಡನಾರ್ಹ. ಮೈಸೂರಿನ ಯಾವು ದಾದರೂ ವೃತ್ತದಲ್ಲಿ ಅಮರಶಿಲ್ಪಿ ಜಕಣಾ ಚಾರಿ ಪ್ರತಿಮೆ ಸ್ಥಾಪನೆಗೆ ನಗರ ಪಾಲಿಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಮುಖ್ಯ ಅತಿಥಿಗಳಾದ ಕಾಂಗ್ರೆಸ್ ಯುವ ಮುಖಂಡರಾದ ಎನ್ ಎಂ ನವೀನ್ ಕುಮಾರ್, ಯುವ ಮುಖಂಡರಾದ ಚರಣ್ ರಾಜ್ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ವಿಶ್ವಕರ್ಮ ಸಮುದಾಯದ ಮುಖಂಡರುಗಳಾದ ಚಂದ್ರು ,ಚಂದ್ರು ವಿಶ್ವಕರ್ಮ ,ವೇಣುಗೋಪಾಲ್ ,ಪ್ರಜ್ಞಾವಂತ ನಾಗರಿಕ ವೇದಿಕೆಯ ಅಧ್ಯಕ್ಷ ಕಡಕೊಳ ಜಗದೀಶ್ ,ಸುಚೀಂದ್ರ ,ಸಂತೋಷ್ ಗೌಡ, ಮೋಹನ್ ಕುಮಾರ್ ಗೌಡ ಇನ್ನಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss