Thursday, August 11, 2022

Latest Posts

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದುವರಿದ ಮಳೆ: ಮಲೆನಾಡು, ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಹಾ ಮಳೆ ತನ್ನ ಆರ್ಭಟ ಮುಂದುವರಿಸಿದ್ದು, ಕರಾವಳಿ,ಮಲೆನಾಡು ಹಾಗೂ ಉ.ಕ ಭಾಗದ ಜನ ಮಳೆಯಿಂದ ಹೈರಾಣಾಗಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಳೆ ಮುಂದುವರಿದಿದ್ದು,ಮೂರು ದಿನದ ಹಿಂದೆ ಕಾಣೆಯಾಗಿದ್ದ ವೃದ್ಧೆಯೊಬ್ಬರು ಇಂದು ಶವವಾಗಿ ದೊರೆತಿದ್ದಾರೆ. ಇನ್ನು ಕುದುರೆಮುಖ ಭಾಗದಲ್ಲೂ ವ್ಯಾಪಕ ಮಳೆಯಾಗುತ್ತಿದ್ದು,ಸುಳಿಗೆ ಸಿಲುಕಿ ಪ್ರಾಣಿಗಳು ತೊಂದರೆ ಅನುಭವಿಸುತ್ತಿವೆ. ಶಿವಮೊಗ್ಗದಲ್ಲಿ ಮಳೆ ಸ್ವಲ್ಪ ಕಡಿಮೆಯಾಗಿದ್ದು, ಸಣ್ಣ ಪುಟ್ಟ ಹಾನಿ ಸಂಭವಿಸಿದೆ.
ರಾಜ್ಯಾದ್ಯಂತ ಸುರಿದ ಮಳೆಗೆ ಒಟ್ಟಾರೆ ನೂರು ರಸ್ತೆಗಳು ಹಾಗೂ ಸೇತುವೆಗಳು ಹಾನಿಗೀಡಾಗಿವೆ. ಮೈಸೂರಿನ ಕಬಿನಿ ಜಲಾಶಯದಿಂದ ಭಾರೀ ಪ್ರಮಾಣದ ನೀರು ಹೊರಬಿಡಲಾಗುತ್ತಿದ್ದು, ಕಬಿನಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮೈಸೂರು ನಂಜನಗೂಡು ಹೆದ್ದಾರಿ ಮುಳುಗಡೆಯಾಗಿದೆ. ನಂಜನಗೂಡಿನಲ್ಲಿ ನಲವತ್ತಕ್ಕೂ ಹೆಚ್ಚು ಮನೆ ಜಲಾವೃತಗೊಂಡಿದೆ.
ಶಿವಮೊಗ್ಗ,ಕೊಡಗು,ಚಿಕ್ಕಮಗಳೂರು,ಉಡುಪಿ,ದಕ್ಷಿಣ ಕನ್ನಡದಲ್ಲಿ ಇಂದು ಹೆಚ್ಚು ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಣೆಯಾಗಿದೆ. ಮಡಿಕೇರಿಯಲ್ಲಿ ಗುಡ್ಡ ಕುಸಿತದಿಂದ ಕಾಣೆಯಾಗಿದ್ದ ಅರ್ಚಕರ ಕುಟುಂಬದಲ್ಲಿ, ಅರ್ಚಕರ ತಮ್ಮನ ಶವ ಪತ್ತೆಯಾಗಿದೆ. ಗುಡ್ಡ ಕುಸಿತದಿಂದ ಚಾರ್ಮಾಡಿ ಘಾಟ್ ಬಂದ್ ಆಗಿದೆ.
ಬೆಳಗಾವಿಯಲ್ಲಿ ಮಲಪ್ರಭಾ ನದಿ ಅಪಾಯದ ಮಟ್ಟ ಮೀತಿ ಹರಿಯುತ್ತಿದ್ದು,ಸಾಕಷ್ಟು ಬೆಳೆ ಹಾನಿಯಾಗಿದೆ. ಬೇಂಡಿಗೇರಿ ಗ್ರಾಮದ ಬಳಿ ಕೆರೆಯೊಂದು ಒಡೆದಿದ್ದು,ನೂರಕ್ಕೂ ಹೆಚ್ಚು ಜಮೀನುಗಳು ಜಲಾವೃತವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss