Wednesday, August 10, 2022

Latest Posts

ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಗೆ ಕೋಲಾರ ಜಿಲ್ಲೆಯ ಎಂ.ಎನ್.ರವಿಶಂಕರ್, ಕೆ.ಎಂ.ರಾಜಣ್ಣ ಆಯ್ಕೆ

ಹೊಸ ದಿಗಂತ ವರದಿ, ಕೋಲಾರ: 

ದಿವಂಗತ ಶ್ರೀ ಸಿ. ಬೆರೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಗೆ ಕೋಲಾರ ತಾಲ್ಲೂಕಿನ ಮದನಹಳ್ಳಿಯ  ಎಂ.ಎನ್.ರವಿಶಂಕರ್ ಬಿನ್ ಲೇ.ವಿ.ನಾಗರಾಜರೆಡ್ಡಿ ಹಾಗೂ ಡಾ.ಆರ್.ದ್ವಾರಕಾನಾಥ್ ಅವರ ಹೆಸರಿನಲ್ಲಿ ನೀಡುವ ಅತ್ಯುತ್ತಮ ರೈತ ಪ್ರಶಸ್ತಿಗೆ ಕೃಷ್ಣಾಪುರದ ಕೆ.ಎಂ.ರಾಜಣ್ಣ ಬಿನ್ ಲೇ.ಎಂ.ಮುನಿಯಪ್ಪ ಭಾಜನರಾಗಿದ್ದಾರೆ.
ಅದೇ ರೀತಿ ಜಿಲ್ಲಾ ಮಟ್ಟದ ರೈತ ಪ್ರಶಸ್ತಿಗೆ ತಾಲ್ಲೂಕಿನ ಅರಿನಾಗನಹಳ್ಳಿಯ ಮುನಿರೆಡ್ಡಿ ಬಿನ್ ಅಶ್ವತ್ಥಗೌಡ ಆಯ್ಕೆಯಾಗಿದ್ದು, ಅತ್ಯುತ್ತಮ ಜಿಲ್ಲಾಮಟ್ಟದ ರೈತ ಮಹಿಳಾ ಪ್ರಶಸ್ತಿಗೆ ಶ್ರೀನಿವಾಸಪುರ ತಾಲ್ಲೂಕಿನ ಗುಂಡಮನತ್ತ ಗ್ರಾಮದ ಎ.ವಿ.ರತ್ನಮ್ಮ ಬಿನ್ ಜಿ.ಎಂ.ನಾರಾಯಣಸ್ವಾಮಿ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಗಳನ್ನು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ 2020ರ ನವೆಂಬರ್ 11, 12 ಮತ್ತು 13 ರಂದು ಮೂರು ದಿನಗಳ ಕಾಲ ಜರುಗುವ ಸರಳ ಕೃಷಿಮೇಳದಲ್ಲಿ ನೀಡಲಾಗುವುದು. ಈ ಸಮಾರಂಭವನ್ನು ಭೌತಿಕವಾಗಿ ಮತ್ತು ಸಾಮಾಜಿಕ ಜಾಲತಾಣಗಳಾದ ವೆಬ್‌ಸೈಟ್, ಯೂಟ್ಯೂಬ್, ಫೇಸ್‌ಬುಕ್, ಟ್ಟಿಟ್ಟರ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಜೂಮ್ ಸಭೆ ಮೂಲಕ ನೇರವಾಗಿ ವೀಕ್ಷಿಸಬಹುದು ಎಂದು ಕೃಷಿ ವಿವಿ ಪ್ರಕಟಣೆ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss